ಚಿತ್ರದುರ್ಗ: ಕೇಸರಿ ಪೇಟ ಕಿತ್ತೆಸೆದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ತಲೆಯಲ್ಲಿ ಸಗಣಿ ಇತ್ತಾ..?, ಕೇಸರಿ ತ್ಯಾಗ, ಬಲಿದಾನದ ಸಂಕೇತ, ರಾಷ್ಟ್ರಧ್ವಜದ ಮೇಲೆ ಗೌರವ ಇದೆ. ಉಡುಪಿಯಲ್ಲಿ 6 ಮಂದಿ ಮಾತ್ರ ಹಿಜಾಬ್ ಧರಿಸಿದ್ರು, ಅವರನ್ನು ಮುಸ್ಲಿಂ ಮುಖಂಡರು, ಕಾಂಗ್ರೆಸ್ ಪ್ರಚೋದಿಸಿದ್ದಾರೆ. ಆ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ್ರೆ ಇಂಥಾ ಸ್ಥಿತಿ ಬರ್ತಾ ಇರಲಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಈ ಬಗ್ಗೆ ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ , ಉಡುಪಿಯಲ್ಲಿ 6 ಮಂದಿ ಮಾತ್ರ ಹಿಜಾಬ್ ಧರಿಸಿದ್ದರು, ಅವರನ್ನು ಮುಸ್ಲಿಂ ಮುಖಂಡರು, ಕಾಂಗ್ರೆಸ್ ಪ್ರಚೋದಿಸಿದ್ದಾರೆ. ಆ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ್ರೆ ಇಂಥಾ ಸ್ಥಿತಿ ಬರ್ತಾ ಇರಲಿಲ್ಲ,ಇದೊಂದು ವ್ಯವಸ್ಥಿತ ಸಂಚು, ಇದರ ವಿರುದ್ಧ ಹೋರಾಡ್ತೇವೆ, ಕ್ರಿಶ್ಚಿಯನ್ ಶಾಲೆಗಳಿಗೆ ಹಿಜಾಬ್ ಧರಿಸಿ ಇವರೆಲ್ಲಾ ಹೋಗುತ್ತಾರಾ? ಓಟಿನ ಮೇಲೆ ಕಣ್ಣಿಟ್ಟು ಮಾಡುತ್ತಿರುವ ಕುತಂತ್ರ ಇದಾಗಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಸೂರತ್ನಿಂದ ಕೇಸರಿ ಶಾಲು ತರಿಸಿದ್ದಾರೆ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಪ್ರತಿಕ್ರಿಯಿಸಿದ್ದು, 50 ಲಕ್ಷ ಕೇಸರಿ ಶಾಲು ಬಂದಿವೆ ಎಂದು ಡಿಕೆಶಿ ಹೇಳಿದ್ದಾರೆ, ಅಯೋಧ್ಯೆಯ ಶ್ರೀರಾಮನ ಫ್ಯಾಕ್ಟರಿಗೆ ನಾವು ಆರ್ಡರ್ ನೀಡಿದ್ದು, ಹನುಮಾನ್ ಟ್ರಾನ್ಸ್ಪೋರ್ಟ್ನಲ್ಲಿ ರಾಜ್ಯಕ್ಕೆ ಶಾಲು ಬಂದಿವೆ. ರಾಜ್ಯದ ಕೋಟಿ-ಕೋಟಿ ಯುವಕರ ಹೃದಯದಲ್ಲಿ ಕೇಸರಿ ಇದೆ, ಇದು ಎಲ್ಲಿಂದ ಬಂತು ಕಾಂಗ್ರೆಸ್ನವರು ಹೇಳ್ತಾರಾ ಎಂದು ಈಶ್ವರಪ್ಪ ಹೇಳಿದ್ದಾರೆ.