ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ರಿಸೈನ್ ಮಾಡೋದು ಕನ್ಫರ್ಮ್ ಆಗಿದ್ದು, ರಿಸೈನ್ ಮಾಡದೇ ಇದ್ರೆ ಸಂಪುಟದಿಂದ ಕಿಕ್ಔಟ್ ಗ್ಯಾರೆಂಟಿಯಾಗಿದೆ.
ಡಿವೈಎಸ್ಪಿ ಗಣಪತಿ ಕೇಸ್ನಲ್ಲಿ ಆಗಿದ್ದೂ ಇದೆ, ಸಂತೋಷ್ ಪಾಟೀಲ್ ಕೇಸ್ನಲ್ಲೂ ಈಶ್ವರಪ್ಪ ವಿರುದ್ಧ ನೇರ ಆರೋಪ ವಿದೆ. ಸಂತೋಷ್ ಮಾಧ್ಯಮಗಳಿಗೆ ವಾಟ್ಸಾಪ್ ಮೆಸೇಜ್ ಮಾಡಿಯೇ ಸೂಸೈಡ್ ಮಾಡಿಕೊಂಡಿದ್ದಾರೆ. ವಾಟ್ಸಾಪ್ ಮೆಸೇಜ್ನಲ್ಲಿ ನನ್ನ ಸಾವಿಗೆ ನೇರ ಕಾರಣ ಸಚಿವ ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನ ಎಲ್ಲಾ ಆಸೆ ಬದಿಗೊತ್ತಿ ಈ ನಿರ್ಧಾರ ಮಾಡಿದ್ದೇನೆ. ನನ್ನ ಮಡದಿ-ಮಕ್ಕಳಿಗೆ ಸರ್ಕಾರವೇ ಸಹಾಯ ಮಾಡ್ಬೇಕು. ನನ್ನ ಜೊತೆಗಿದ್ದ ಸಂತೋಷ್, ಪ್ರಶಾಂತ್ರನ್ನು ಕರ್ಕೊಂಡು ಬಂದಿದ್ದೇನೆ. ನನ್ನ ಸಾವಿಗೂ ಇವರಿಗೂ ಸಂಬಂಧ ಇಲ್ಲ ಎಂದು ಮೆಸೇಜ್ ಮಾಡಿದ್ದಾರೆ.
ಸಂತೋಷ್ ಹಿಂದೂ ಯುವ ವಾಹಿನಿ ಸಂಘಟನೆ ಮುನ್ನಡೆಸುತ್ತಿದ್ದರು. ಕಾಮಗಾರಿ ಬಿಲ್ ರಿಲೀಸ್ ಮಾಡದೇ ಕಿರುಕುಳ ಕೊಡ್ತಿದ್ದಾರೆ, ಕಮಿಷನ್ ಕಾರಣಕ್ಕೆ ಬಿಲ್ ಮಂಜೂರು ಮಾಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೂ ಹಾಗೂ ಸಿಎಂ, ರಾಜ್ಯಪಾಲರಿಗೂ ಪತ್ರ ಬರೆದು ದೂರು ನೀಡಿದ್ದರು.
ಇದನ್ನೂ ಓದಿ : #Flashnews ಸಚಿವ ಈಶ್ವರಪ್ಪಗೆ ದೊಡ್ಡ ಸಂಕಷ್ಟ..! ಕಾಂಟ್ರ್ಯಾಕ್ಟರ್ ಸಂತೋಷ್ ಪಾಟೀಲ್ ಸೂಸೈಡ್..?