ಬೆಂಗಳೂರು: ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರು ಪಾದಯಾತ್ರೆ ನಡೆಸುವ ವೇಳೆ ವೃದ್ಧ ಮಹಿಳೆಯೊಬ್ಬರು ಸಚಿವರಿಗೆ ದೃಷ್ಟಿ ನಿವಾಳಿಸಿದ್ದಾರೆ.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಶವಂತಪುರ ವೃತ್ತದ ಆಸುಪಾಸಿನ ರಸ್ತೆಗಳಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಪಾದಯಾತ್ರೆ ಮಾಡಿ, ಜನರ ಕುಂದುಕೊರತೆಗಳನ್ನು ಆಲಿಸಿದರು. ಪಕ್ಷದ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ತ್ರಿವೇಣಿ ರಸ್ತೆ ಮತ್ತು ಕೆ.ಎನ್. ಬಡಾವಣೆಯ ಹಲವು ರಸ್ತೆಗಳಲ್ಲಿ ಪಾದಯಾತ್ರೆ ಮಾಡಿದರು.
ಇದನ್ನೂ ಓದಿ: ವಿಕಲಚೇತನ ಯುವಕನ ಮನವಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ… ಎಲೆಕ್ಟ್ರಿಕ್ ವೆಹಿಕಲ್ ಕೊಡಿಸುವಂತೆ ಡಿಸಿಗೆ ಸೂಚನೆ…
ಪಾದಯಾತ್ರೆಯ ಸಂದರ್ಭದಲ್ಲಿ ತ್ರಿವೇಣಿ ರಸ್ತೆ ಸಮೀಪ ಸಚಿವರ ಎದುರಿಗೆ ಬಂದ ವೃದ್ಧ ಮಹಿಳೆಯೊಬ್ಬರು, ಸಾಂಪ್ರದಾಯಿಕ ನಂಬಿಕೆಯಂತೆ ತಮ್ಮ ಸೀರೆಯ ಸೆರಗಿನ ಅಂಚಿನಿಂದ ಮೂರು ಸಲ ದೃಷ್ಟಿ ನೀವಾಳಿಸಿ, ಸಚಿವರಿಗೆ ಶುಭ ಕೋರಿದರು.