ಬೆಂಗಳೂರು : ಬೆಂಗಳೂರಿನಲ್ಲಿ ಕಿರಿಕ್ ಕೀರ್ತಿ ಮೇಲೆ ಹಲ್ಲೆಯಾಗಿದೆ. ಬಿಯರ್ ಬಾಟಲ್ನಿಂದ ಕಿರಿಕ್ ಕೀರ್ತಿಗೆ ಅಪರಿಚಿತ ಥಳಿಸಿದ್ದಾನೆ. ಮೇಖ್ರಿ ಸರ್ಕಲ್ ಬಳಿ ಇರುವ ಹ್ಯಾಮರ್ಡ್ ಪಬ್ನಲ್ಲಿ ಕುಡಿದ ಮತ್ತಿನಲ್ಲಿ ತಡರಾತ್ರಿಯಲ್ಲಿ ಗಲಾಟೆ ನಡೆದಿದ್ದು , ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲ್ನಿಂದ ಪುಂಡರು ಹಲ್ಲೆ ಮಾಡಿದ್ದಾರೆ. ಕೀರ್ತಿ ಕುತ್ತಿಗೆ ಮತ್ತು ಕೈಗೆ ಭಾರೀ ಏಟಾಗಿದ್ದು, ನಂತರ ಆಸ್ಪತ್ರೆಗೆ ತೆರಳಿ ಸ್ಟಿಚ್ ಹಾಕಿಸಿಕೊಂಡಿದ್ದಾರೆ.
ನೆನ್ನೆ ರಾತ್ರಿ ಸುಮಾರು 8 ಗಂಟೆಗೆ ಕೀರ್ತಿ ಪಬ್ಗೆ ಹೋಗಿದ್ದು, ಈ ವೇಳೆ ಪಬ್ನಲ್ಲಿ ಪಕ್ಕದ ಟೇಬಲ್ನಲ್ಲಿದ್ದ ಪುಂಡರು ಕೀರ್ತಿ ಅವರಿಗೆ ಕಿಂಡಲ್ ಮಾಡಿದ್ದು, ಪಬ್ನಲ್ಲಿದ್ದ ಜನ ಖಾಲಿ ಆದ್ಮೇಲೆ ಕೀರ್ತಿ ಬಳಿ ಬಂದು ಕಿರಿಕ್ ಅಲ್ವೇನೋ ಅಂತ ಪ್ರಶ್ನೆ ಮಾಡಿದ್ದಾರೆ . ನಾನ್ಯಾರು ಗೊತ್ತಿಲ್ವಾ ಅಂತ ಪ್ರಶ್ನಿಸಿ ಆವಾಜ್ ಹಾಕಿದ್ದಾರೆ, ಅದನ್ನು ಒಬ್ಬ ವ್ಯಕ್ತಿ ವಿಡಿಯೋ ಮಾಡಿಕೊಂಡಿದ್ದು ಕಿರಿಕ್ ಕೀರ್ತಿ ವಿಡಿಯೋ ಮಾಡಿಕೊಂಡವನನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಪುಂಡರು ಬಿಯರ್ ಬಾಟಲಿಯಿಂದ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದೀಗ ಹಲ್ಲೆ ನಡೆಸಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 324 ನಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:#Flashnews ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ …! ಹಲ್ಲೆಗೆ ಕಾರಣವೇನು ಗೊತ್ತಾ..?