ಬೆಂಗಳೂರು : ಮೇಟ್ರೋ ಪಿಲ್ಲರ್ ದುರಂತ ಪ್ರಕರಣ BMRCL ಎಂಡಿ ಅಂಜುಂ ಪರ್ವೇಜ್ ವಿಚಾರಣೆ ಮುಗಿಸಿ ಹೋಗಿದ್ದು, ಎರಡು ಗಂಟೆ ವಿಚಾರಣೆ ಎದುರಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ BMRCL ಎಂಡಿ ಅಂಜುಂ ಪರ್ವೇಜ್ ಮಾತನಾಡಿ, ವಿಚಾರಣೆ ಗೆ ಬರುವಂತೆ ಪೊಲೀಸರು ನೋಟಿಸ್ ಕೊಟ್ಟಿದ್ದರು, ಪೊಲೀಸರ ನೋಟಿಸ್ ಹಿನ್ನಲೆ ವಿಚಾರಣೆ ಹಾಜರಾಗಿದ್ದೆ. ವಿಚಾರಣೆಯಲ್ಲಿ ದುರಂತ ಸಂಬಂದ ಪಟ್ಟಂತೆ ಒಂದಷ್ಟು ಪ್ರಶ್ನೆ ಕೇಳಿದ್ದರು ಅದಕ್ಕೆ ನಾವು ಉತ್ತರ ಕೊಟ್ಟಿದ್ದೇನೆ. ಉಳಿದಂತೆ ಐಐಎಸ್ಸಿ ವರದಿ ನಮ್ಮ ಕೈ ಸೇರಿಲ್ಲ, ವರದಿ ಸಂಪೂರ್ಣ ಸ್ಟಡಿ ಮಾಡಿದ ಬಳಿಕ ಲೋಪದೋಷಗಳು ಕಂಡು ಬಂದರೆ ಕ್ರಮ ಜರಗಿಸಲಾಗುತ್ತೆ. ಈಗಾಲೇ ಮೂವರು ಎಂಜಿನಿಯರ್ಸ್ ಗಳನ್ನ ಅಮಾನಾತು ಮಾಡಲಾಗಿದೆ, ಐಐಎಸ್ ಸಿ ಕೊಟ್ಟಿರೋ ವರದಿನ್ನ ನಾನು ನೋಡಿಲ್ಲ. ಎನ್ ಸಿಸಿ ಅವರದು ಮೂವರಿಗೆ ಡಿ ಮೊಬೈಲ್ ಲೈಜ್ ಮಾಡಲಾಗಿದೆ, ಬಿಎಂಆರ್ ಸಿಎಲ್ ಎಂಜಿನಿಯರ್ ಗಳಿಗೆ ಹೊಸದಾಗಿ ಟ್ರೈನಿಂಗ್ ಕೊಡಲಾಗುತ್ತಿದೆ. ಮುಂದೆ ಇಂತಹ ದುರಂತಗಳು ನಡೆದಂತೆ ಏನೇಲ್ಲಾ ಕ್ರಮ ಕೈಗೊಳ್ಳಬೇಕು ಅನ್ನೋದ್ರ ಬಗ್ಗೆ ಎಸ್ ಒಪಿ ಬದಲಾವಣೆ ಮಾಡಲಾಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಬಲಿ ಪ್ರಕರಣ… ವಿಚಾರಣೆಗೆ ಹಾಜರಾದ BMRCL ಎಂಡಿ ಅಂಜುಂ ಪರ್ವೇಜ್…