ಬೆಂಗಳೂರು : ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯವಾಗಿದೆ. ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಾಲ್ಕು ದಿನ ಮೆಟ್ರೋ ಸಂಚಾರ ಸ್ಥಗಿತವಾಗಿದೆ.
ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೋ ವಿಸ್ತರಣೆ ಹಿನ್ನಲೆ ಜನವರಿ 27 ರಿಂದ ಜನವರಿ 30 ರ ವರೆಗೆ ನಾಲ್ಕು ದಿನ ಮೆಟ್ರೋ ಸ್ಥಗಿತವಾಗಿದೆ. ಹೊಸ ಮಾರ್ಗದ ತಾಂತ್ರಿಕ ಕಾಮಗಾರಿಗಾಗಿ ಮೆಟ್ರೋ ಸಂಚಾರ ರದ್ದಾಗಿದೆ. ಮೈಸೂರು ರಸ್ತೆ ನಿಲ್ದಾಣದಿಂದ ಬೈಯ್ಯಪ್ಪನಹಳ್ಳಿವರೆಗಿನ ಸಂಚಾರ ಎಂದಿನಂತೆ ಇರಲಿದ್ದು, ಈ ಮಾರ್ಗದಲ್ಲಿ ಯಾವುದೇ ವ್ಯತ್ಯಯ ಇಲ್ಲ.
ಇದನ್ನೂ ಓದಿ : ದೈನಂದಿನ ರಾಶಿ ಭವಿಷ್ಯ..! 25/01/23