ಬೆಂಗಳೂರು: ಮೆಟ್ರೋ ಕಿಲ್ಲರ್ ಪಿಲ್ಲರ್ ಪ್ರಕರಣ ಸಂಬಂಧ NCC ಕಂಪನಿಗೆ ಸಂಕಷ್ಟ ಫಿಕ್ಸ್ ಆಗಿದ್ದು,
BMRCL ಎಂಡಿಗೇ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.
ಗೋವಿಂದಪುರ ಪೊಲೀಸರಿಂದ ಅಂಜುಮ್ ಪರ್ವೇಜ್ಗೆ ನೋಟಿಸ್ ನೀಡಲಾಗಿದ್ದು, ಅಂಜುಮ್ ಪರ್ವೇಜ್ ಸೇರಿ 15 ಮಂದಿಗೆ ನೋಟಿಸ್ ಕೊಡಲಾಗಿದೆ. NCC ಮುಖ್ಯಸ್ಥರನ್ನೂ ಲಾಕ್ ಮಾಡೋದು ಗ್ಯಾರೆಂಟಿ ಆಗಿದ್ದು,
ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ ಮಾಲೀಕರೂ ಅರೆಸ್ಟ್?.
ಸಿಎಂ ಸೂಚನೆಯಂತೆ NCC ವಿರುದ್ಧ ಆಂತರಿಕ ತನಿಖೆ ನಡೆಸಲಾಗುತ್ತಿದ್ದು, ಎಷ್ಟೇ ದೊಡ್ಡವರಿದ್ದರೂ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ NCCಯ ತಪ್ಪು ಸಾಬೀತಾಗಿದೆ ಹೀಗಾಗಿ ಯಾವುದೇ ಕ್ಷಣದಲ್ಲಿ ಕಾಂಟ್ರಾಕ್ಟರ್ ಅರೆಸ್ಟ್ ಸಾಧ್ಯತೆಗಳಿದೆ. IIT ರಿಪೋರ್ಟ್ ಬೆಂಗಳೂರು ಕಮಿಷನರ್ ಪ್ರತಾಪ್ ರೆಡ್ಡಿ ಕೈಸೇರಿದ್ದು,
ರಿಪೋರ್ಟ್ನಲ್ಲಿ ಕಾಂಟ್ರಾಕ್ಟರ್ಸ್ ನಿರ್ಲಕ್ಷ್ಯ ವಹಿಸಿರೋದು ಪತ್ತೆಯಾಗಿದೆ.
ಮೆಟ್ರೋ ಎಂಜಿನಿಯರ್ಗಳ ನಿರ್ಲಕ್ಷ್ಯದ ಬಗ್ಗೆಯೂ ವರದಿ ಬಂದಿದ್ದು, ನಾಳೆ IIScಯಿಂದಲೂ BMRCLಗೆ ಫೈನಲ್ ವರದಿ ಬರಲಿದೆ. IISc ವರದಿಯಲ್ಲಿ ಎಂಜಿನಿಯರ್, ಕಾಂಟ್ರಾಕ್ಟರ್ ನಿರ್ಲಕ್ಷ್ಯ ಉಲ್ಲೇಖ ಮಾಡಲಾಗಿದೆ. ಈಗಾಗಲೇ ತಾಂತ್ರಿಕ ತನಿಖೆ ನಡೆಸಿ IISc ವರದಿ ಸಿದ್ದಪಡಿಸಿದೆ. ಕಾಮಗಾರಿಗೆ ಬಳಸಿದ್ದ ಕಂಬಿ, ಮರಳು, ಸೀಮೆಂಟ್ ಗುಣಮಟ್ಟ ಪರೀಕ್ಷೆ ನಡೆಸಲಾಗಿದ್ದು, ತಜ್ಞರು ಜಲ್ಲಿ , ಮಣ್ಣು ,ಸಿಮೆಂಟ್ ಟೆಸ್ಟಿಂಗ್ ರಿಪೋರ್ಟ್ ಪಡೆದಿದ್ದಾರೆ.
18 ಮೀಟರ್ ಎತ್ತರದ ಕಬ್ಬಿಣದ ಪಿಲ್ಲರ್ ಕಟ್ಟಿದ್ದ BMRCL, ಅಷ್ಟು ಉದ್ದದ ಪಿಲ್ಲರ್ ಕಂಬಿ ಕಟ್ಟುವಾಗ ಮುಂಜಾಗ್ರತೆ ವಹಿಸಿಲ್ಲ,IISc ಕಾಂಟ್ರಾಕ್ಟರ್ ಹಾಗೂ ಇಂಜಿನಿಯರ್ ತಪ್ಪು ಎತ್ತಿಹಿಡಿದಿದೆ. NCC ನಿರ್ಲಕ್ಷ್ಯ ಪತ್ತೆಯಿಂದ ಬ್ಲಾಕ್ಲಿಸ್ಟ್ಗೆ ಸೇರಿಸೋದು ಗ್ಯಾರೆಂಟಿನಾ..? ಮೆಟ್ರೋ, ಬೆಸ್ಕಾಂ, BWSSB, BBMP ಸೇರಿ ವಿವಿಧ ಇಲಾಖೆಗಳ ಕಾಮಗಾರಿ ರದ್ದು? ಹೈದ್ರಾಬಾದ್ ಮೂಲದ NCC ನಡೆಸ್ತಿರೋ ಎಲ್ಲಾ ಕಾಮಗಾರಿ ರದ್ದು ಸಾಧ್ಯತೆಗಳಿದೆ.
ಇದನ್ನೂ ಓದಿ:ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದ ಕಾಂತಾರ ತಂಡ..! ಹರಕೆ ತೀರಿಸಿದ ಅದ್ಬುತ ಕ್ಷಣ ಇಲ್ಲಿದೆ..