ಬೆಳಗಾವಿ: ಮರಾಠ ಕೋ -ಆಪರೇಟಿವ್ ಬ್ಯಾಂಕ್‌ನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಎಂಇಎಸ್ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿ ಮತ್ತೆ ಪುಂಡಾಟ ಮೆರೆದಿದ್ದಾರೆ.
ರಾಜ್ಯಸಭಾ ಸದಸ್ಯ ಹಾಗೂ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಪವಾರ್ ಭಾಷಣ ಆರಂಭಿಸುತ್ತಿದ್ದಂತೆಯೇ ಕಾರ್ಯಕರ್ತರು, ‘ಬೆಳಗಾಂವ್, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಹಿಜೆ’ (ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು) ಎಂದು ಮರಾಠಿಯಲ್ಲಿ ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: PSI ನೇಮಕಾತಿ ಅಕ್ರಮ : ಆರೋಪಿ ದಿವ್ಯಾ ಹಾಗರಗಿಗೆ ಕೈದಿ ನಂಬರ್ ನೀಡಿದ ಜೈಲು ಅಧಿಕಾರಿಗಳು..!
ಇನ್ನು ಘೋಷಣೆ ಕೂಗುವ ವೇಳೆ ಶರದ್ ಪವಾರ್ ಮಾತು ನಿಲ್ಲಿಸಿ ‘ಭಾಷಣ ಆರಂಭಿಸಬಹುದಾ, ನಿಮ್ಮ ಅನುಮತಿ ಪಡೆದು ಭಾಷಣ ಶುರುಮಾಡುತ್ತೇನೆ’ ಎಂದು ಮಾತು ಮುಂದುವರಿಸಿದ್ದಾರೆ.
ಸ್ಥಳ: ಬೆಳಗಾವಿ
ವರದಿ: ಅಜಿತ ಸಣ್ಣಕ್ಕಿ