ಬೆಳಗಾವಿ: ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಜಯಬೇರಿ ಬಾರಿಸಿದೆ. ನಿರೀಕ್ಷೆಗೂ ಮೀರಿ ಜಯ ಸಾಧಿಸಿದ್ದು, ಬೆಳಗಾವಿ ಚುಣಾವಣೆಯನ್ನು ಹೆಗಲ ಮೇಲೆ ಹೊತ್ತು ಯಶಸ್ವಿಯಾಗಿಸಿರುವ ಸತೀಶ್ ರೆಡ್ಡಿ ಬಿಟಿವಿಯೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮತ್ತೆ ಭುಗಿಲೆದ್ದ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ವಿವಾದ…
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಜಯ ಸಾಧಿಸಿದೆ. ಇದೇ ಹಿನ್ನಲೆ ಮಾತನಾಡಿದ ಸತೀಶ್ ರೆಡ್ಡಿ ಭಾಷೆಯನ್ನು ಮೀರಿ ಬೆಳಗಾವಿ ಜನರು ಅಭಿವೃದ್ದಿಗೆ ಹೆಚ್ಚುವತ್ತು ಕೊಡುತ್ತಿದ್ದಾರೆ. ಬಿಜೆಪಿ ಪಕ್ಷ ಮಾಡುವವಂತಹ ಕೆಲಸಗಳು, ಬಿಜೆಪಿ ಯಾವ ಉದ್ದೇಶಕ್ಕೆ ಚುಣಾವಣೆಯಲ್ಲಿ ಕಂಟೆಸ್ಟ್ ಮಾಡಬೇಕು ಎಂದುಕೊಂಡಿದ್ದೇವೊ ಆ ಉದ್ದೇಶ ಜನತೆಗೆ ಇಷ್ಟವಾಗಿದೆ ಎಂದು ಹೇಳಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗೆಲುವು ಸಾಧಿಸಲು ಎಂಇಎಸ್ ಭಾಷೆ ಬಗ್ಗೆ ಗೊಂದಲ ಹುಟ್ಟುಹಾಕಿ ಜಯ ಸಾಧಿಸುತ್ತಿದ್ರು, ಕಳೆದು 15-20 ವರ್ಷದಲ್ಲಿ ಬರಿ ಭಾಷೆ ವಿಷಯ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿತ್ತು. ಆದ್ರೆ ಎಂಇಎಸ್ ಅಭಿವೃದ್ದಿಯನ್ನೆ ಮರೆತಿತ್ತು. ಬೆಳಗಾವಿ ಜನರಿಗೆ ಅಭಿವೃದ್ದಿ ಬೇಕಾಗಿದ್ದುದ್ದರಿಂದ ಬ್ಲ್ಯಾಕ್ ಮೇಲ್ ಗೆ ಬಗ್ಗದೆ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.
ಪ್ರಚಾರದ ಹಿನ್ನಲೆ ಹತ್ತೇ ದಿನದಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ಕೆಲಸ ಮಾಡುವ ಸಲುವಾಗಿ ನೂರು ಜನ ಕಾರ್ಯಕರ್ತರ ಜೊತೆ ಸೇರಿ ಆ್ಯಪ್ ಕ್ರೀಯೆಟ್ ಮಾಡಿ ಜನರ ವಿಶ್ವಾಸ ಗಳಿಸುವ ಕೆಲಸವನ್ನು ಮಾಡಿದ್ದೇವೆ. ಜಿಲ್ಲಾಧ್ಯಕ್ಷರು, ರಾಜ್ಯಾಧ್ತಕ್ಷರ ಜೊತೆ ಸೇರಿ ಮಾಡಿರುವ ಕೆಲಸಕ್ಕೆ 35ಕ್ಕೂ ಹೆಚ್ಚು ಜಯ ಗಳಿಸಿದ್ದೇವೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.
ಎಂಇಎಸ್ ನಲ್ಲಿ ಎಲ್ಲಾ ಪಾರ್ಟಿಗಳಿ ಸೇರಿ ಕಂಟೆಸ್ಟ್ ಮಾಡ್ತಿದ್ರು. ಇದೇ ಮೊದಲ ಬಾರಿ ಎಂಇಎಸ್ ನಿಂದ ಬಿಜೆಪಿ ಹೊರ ಬಂದು ಜಯಗಳಿಸಿದೆ. ಎಂಇಎಸ್ ಸ್ಟ್ರಾಂಗ್, ತಾವೇ ಶಕ್ತಿವಂತರು ಎಂದುಕೊಂಡಿತ್ತು. ಆದ್ರೆ, ಜನ ಉತ್ತರ ನೀಡಿದ್ದಾರೆ. ಅಭಿವೃದ್ದಿಯೆ ಬಿಜೆಪಿ ಮಂತ್ರ ಎಂದುಕೊಂಡು ಕೆಲಸ ಮಾಡುತ್ತೆವೆ. ಬೆಳಗಾವಿಯನ್ನು ಅಭಿವೃದ್ದಿಯ ಹಾದಿಗೆ ಕರೆದುಕೊಂಡು ಹೋಗುತ್ತೆವೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.