ಮತ್ತೆ ದೊಡ್ಮನೆ ಕೈಗೆ ‘ಸಿನಿರಂಗ’ ಶಿಫ್ಟ್ ಆಗಿದೆ. ಡಾ.ರಾಜ್ ಕುಮಾರ್, ರೆಬಲ್ ಸ್ಟಾರ್ ಅಂಬರೀಶ್ ನಂತ್ರ ಕರುನಾಡ ಚಕ್ರವರ್ತಿ ಶಿವಣ್ಣ ಚಂದನವನದ ಬಾಸ್ ಆಗಿದ್ದಾರೆ. ಕಿಲ್ಲರ್ ಕೊರೋನಾ ಹಾವಳಿಯಿಂದಾಗಿ ಮೂರ್ ನಾಲ್ಕು ತಿಂಗಳಿಂದ ಸಂಕಕಷ್ಟಕ್ಕೆ ಸಿಲುಕಿರುವ ಸ್ಯಾಂಡಲ್ ವುಡ್ ಕಾರ್ಮಿಕರ ಬೆನ್ನೆಲುಬಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿಂತಿದ್ದು, ಸ್ಯಾಂಡಲ್ವುಡ್ ಸಮಸ್ಯೆಗಳ ಬಗ್ಗೆ ನಾಗವಾರದಲ್ಲಿರೋ ಶಿವಣ್ಣನ ಮನೆಯಲ್ಲಿ ಮೆಗಾ ಮೀಟಿಂಗ್ ನಡೆದಿದೆ.
ಮಹಾಮಾರಿ ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಅನೇಕ ವರ್ಗಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವುದರ ಮೂಲಕ ಸಹಾಯ ಹಸ್ತ ನೀಡಿದೆ. ಆದರೆ ಚಿತ್ರರಂಗಕ್ಕೆ ಯಾವುದೇ ಪ್ಯಾಕೇಜ್ ಫೋಷಣೆ ಮಾಡಿಲ್ಲ. ಸಿನಿ ಕಾರ್ಮಿಕರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದರ ಬಗ್ಗೆ ಅಸಮಾಧಾನ ಉಂಟಾಗಿದೆ. ಹೀಗಾಗಿ ಸಭೆಯಲ್ಲಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೊಡ್ಮನೆ ಹುಡುಗನ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಲಾಯಿತು.
ಇದನ್ನೂ ಓದಿ : 10 ವರ್ಷದ ಸಿನಿ ಪಯಣದಲ್ಲಿ ಸಿಂಪಲ್ ಸ್ಟಾರ್.! ಹೇಗಿತ್ತು ಗೊತ್ತಾ ರಕ್ಷಿತ್ ಬಣ್ಣದ ಜರ್ನಿ.!
ಸಭೆ ಮುಗಿದ ಬಳಿಕ ಸ್ಯಾಂಡಲ್ ವುಡ್ ಕಾರ್ಮಿಕರ ಕುರಿತು ಮಾದ್ಯಮದವರೊಂದಿಗೆ ಮಾತನಾಡಿದ ಶಿವಣ್ಣ ನಿಮ್ಮ ಜತೆ ನಾನಿದ್ದೇನೆ. ನಾನೇ ಮುಂದೆ ನಿಲ್ತೇನೆ. ಎಲ್ಲಾ ಸಮಸ್ಯೆ ಬಗೆಹರಿಸೋ ಪ್ರಯತ್ನ ಮಾಡ್ತೇನೆ. 5 ತಿಂಗಳಿಂದಲೂ ಸಂಕಷ್ಟ ಎದುರಿಸುತ್ತಿದ್ದೀರಿ. ಮುಂದಿನ ಆರು ತಿಂಗಳೂ ನಮಗೆ ದೊಡ್ಡ ಸವಾಲಾಗಿದೆ. ಸರ್ಕಾರದ ಜತೆ ನಿಂತು ನಮ್ಮ ಸಂಕಷ್ಟ ಪರಿಹರಿಸಿಕೊಳ್ಳೋಣ ಎಂದು ಹೇಳುವುದರ ಮೂಲಕ ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ.
ಹ್ಯಾಟ್ರಿಕ್ ಹೀರೋ ಮನೆಯಲ್ಲಿ ನಡೆದ ಸಭೆಯಲ್ಲಿ ಸಾಧುಕೋಕಿಲ, ರಾಜೇಂದ್ರ ಸಿಂಗ್ ಬಾಬು, ಜಯಣ್ಣ, ಸೂರಪ್ಪ ಬಾಬು, ಉಮೇಶ್ ಬಣಕಾರ್, ಸಾರಾ ಗೋವಿಂದು, ಕೆ ಮಂಜು, ಗುರುಕಿರಣ್, ಬಾಮಾ ಹರೀಶ್, ನಿರ್ಮಾಪಕ ಸಂಘದ ಪ್ರವೀಣ್ ಕುಮಾರ್, ಕೋಟಿ ರಾಮು. ನಿರ್ಮಾಪಕ, ವಿತರಕ ಚಿನ್ನೇಗೌಡ. ಛಾಯಾಗ್ರಾಹಕ ಸಂಘದ ಜೆ.ಜೆ ಕೃಷ್ಣ ಭಾಗಿಯಾಗಿದ್ದರು. ಈ ಮೀಟಿಂಗ್ ನಲ್ಲಿ ಶಿವಣ್ಣ ಚಿತ್ರರಂಗಕ್ಕೆ ವಿಶೇಷ ಪ್ಯಾಕೇಜ್ ಕೇಳಲು ತೀರ್ಮಾನ ತೆಗೆದುಕೊಂಡಿದ್ದಾರೆ.
https://youtu.be/Tk7ydKnvgw8