ಬೆಂಗಳೂರು: ಮಂತ್ರಿ ಗ್ರೂಪ್ ಎಂಡಿಗೆ ಇಡಿಯಿಂದ ಸಮನ್ಸ್ ಜಾರಿ ಹಿನ್ನಲೆ ಇಂದು ಇಡಿ ಕಚೇರಿಗೆ ಹಾಜರಾಗುವ ಸಾಧ್ಯತೆಗಳಿದೆ.
ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್ ಅಡಿ ಇಡಿ ಪ್ರಕರಣ ದಾಖಲಿಸಲಾಗಿದ್ದು, ಛೇರ್ ಮನ್ – ಎಂಡಿ ಸುಶೀಲ್ ಪಾಂಡುರಂಗ್ ಗೆ ಸಮನ್ಸ್ ನೀಡಲಾಗಿತ್ತು, ಸಬ್ ಸೆ. 50(2)(3) ಅಡಿಯಲ್ಲಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಇಡಿ ಅಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದ್ದು, ವೈಯಕ್ತಿಕ ಮತ್ತು ಸಂಸ್ಥೆಯ ವ್ಯವಹಾರದಲ್ಲಿ ಅಕ್ರಮ ಆರೋಪ ಹಿನ್ನೆಲೆ ಸಮನ್ಸ್ ಜಾರಿ ಗೊಳಿಸಲಾಗಿದೆ. ಜೂನ್ 26 ನೇ ತಾರೀಕು ಹಾಜರಾಗಲು ಸೂಚಿಸಲಾಗಿದೆ. ದಕ್ಷಿಣ ಭಾರತದ ಅತೀ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆ ಇದಾಗಿದ್ದು, ಕಳೆದ ವರ್ಷ ಮಂತ್ರಿ ಗ್ರೂಪ್ ಮೇಲೆ ಐಟಿ ದಾಳಿ ಮಾಡಿತ್ತು. ಈ ವೇಳೆ ಅನೇಕ ದಾಖಲೆಗಳ ಸಮೇತ ಇಡಿಗೆ ಮಾಹಿತಿ ಲಭ್ಯವಾಗಿದ್ದು, ಸದ್ಯ ಅದೇ ಮಾಹಿತಿ ಆಧಾರದಲ್ಲಿ ನೋಟೀಸ್ ಜಾರಿಗೊಳಿಸಲಾಗಿದೆ. ಇಂದು ಸುಶೀಲ್ ಪಾಂಡುರಂಗ ಅವರು ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಹಾಜರಾಗುವ ಸಾಧ್ಯತೆಗಳಿದೆ.