ಬೆಂಗಳೂರು: ನಟ ದಿಗಂತ್ ಅವರಿಗೆ ಗೋವಾದಲ್ಲಿ ಕುತ್ತಿಗೆಗೆ ಪೆಟ್ಟು ಬಿದ್ದಿದ್ದು, ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಕುರಿತು ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.
ನಟ ದಿಗಂತ್ ಅವರಿಗೆ ಸ್ಪೋರ್ಟ್ಸ್ ಇಂಜುರಿ ಆಗಿದೆ. ನುರಿತ ವೈದ್ಯರ ತಂಡ ದಿಗಂತ್ ಗೆ ಚಿಕಿತ್ಸೆ ನೀಡುತ್ತಿದೆ. ದಿಗಂತ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ತನ್ನ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿದೆ.