ಚೆನ್ನೈ : ಮಾಂಗಲ್ಯ ಕಳಚಿಡೋ ಮುನ್ನ ಈ ಸುದ್ದಿ ನೋಡಿ, ಮಾಂಗಲ್ಯ ಕಳಚಿಡೋ ಮಹಿಳೆಯರಿಗೆ ಶಾಕ್ ಕೋರ್ಟ್ ಕೊಟ್ಟಿದೆ. ಮಾಂಗಲ್ಯ ಬಿಚ್ಚಿಡೋದು ಗಂಡನಿಗೆ ನೀಡೋ ಮಾನಸಿಕ ಕ್ರೌರ್ಯದ ಪರಾಕಾಷ್ಠೆಯಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಮಾಂಗಲ್ಯ ಬಿಚ್ಚಿಡೋದು ಗಂಡನಿಗೆ ನೀಡೋ ಮಾನಸಿಕ ಕ್ರೌರ್ಯ. ಇದೇ ಕಾರಣಕ್ಕೆ ಕೋರ್ಟ್ ಡಿವೋರ್ಸ್ಗೂ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮಂಗಳಸೂತ್ರ ಮುತ್ತೈದೆಯರ ಅಮೂಲ್ಯ ಮುತ್ತಾಗಿದೆ. ಪತಿ ಬದುಕಿರುವಾಗಲೇ ಮಾಂಗಲ್ಯ ಬಿಚ್ಚಿಡೋದು ಮಾನಸಿಕ ಕ್ರೌರ್ಯವಾಗಿದೆ. ಹೆಂಡತಿಯ ಕತ್ತಿನಲ್ಲಿರೋ ಮಾಂಗಲ್ಯ ಅತ್ಯಂತ ಪವಿತ್ರವಾದುದು. ಇದು ವೈವಾಹಿಕ ಜೀವನದ ನಿರಂತರತೆ. ಗಂಡನ ನಿಧನ ನಂತರವೇ ತಾಳಿಯನ್ನು ತಗೆದು ಹಾಕ್ತಾರೆ, ಬದುಕಿರುವಾಗಲೇ ತಾಳಿ ಕಳಚಿಡುವುದು ಕ್ರೌರ್ಯವಾಗಿದೆ. ಮದ್ರಾಸ್ ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ತಮಿಳುನಾಡಿನ ಪ್ರೊಫೆಸರ್ ಪತ್ನಿ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ.
ಆದೇಶದಲ್ಲಿ ಏನಿದೆ..?
- ಪತ್ನಿ ಮಾಂಗಲ್ಯವನ್ನು ಕಳಚಿಡುವುದು ತಪ್ಪು.
- ತಾಳಿ ತಗೆದಿಡುವುದು ಗಂಡನಿಗೆ ಕೊಡುವ ಮಾನಸಿಕ ಕ್ರೌರ್ಯ.
- ಪತಿಗೆ ಅತಿ ಕ್ರೂರವಾದ ಮಾನಸಿಕ ಕಿರುಕುಳ ಕೊಟ್ಟಂತೆ.
ಈರೋಡ್ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರ ಕೇಸ್ನಲ್ಲಿ ಈ ಆದೇಶ ನೀಡಲಾಗಿದೆ. ಶಿವಕುಮಾರ್ ಅವರು ಕೋರ್ಟ್ ಮೊರೆ ಹೋಗಿದ್ದರು. ಪತ್ನಿ ಮಾಂಗಲ್ಯ ತೆಗೆದಿರುವ ಕಾರಣ ನೀಡಿ ವಿಚ್ಛೇಧನ ಬಯಸಿದ್ದರು. 2016ರಂದು ಕೌಟುಂಬಿಕ ಕೋರ್ಟ್ನಿಂದ ವಿಚ್ಛೇದನ ನಿರಾಕರಣೆ ಆದೇಶ ನೀಡಿದ್ದರು. ಮಹಿಳೆ ತನಗೆ ವಿಚ್ಛೇದನೆ ಬೇಡ ಎಂದು ಅರ್ಜಿ ಸಲ್ಲಿಸಿದ್ದರು. ತಾಳಿ ಕಟ್ಟುವುದು ಅನಿವಾರ್ಯವಲ್ಲ ಎಂದು ಮಹಿಳೆ ಪರ ವಕೀಲರ ವಾದ ಮಾಡಿದ್ದರು. ವೈವಾಹಿಕ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಾದ ನಡೆಸಿದ್ದರು. ಆದ್ರೆ ಹಿಂದೂ ಸಂಪ್ರದಾಯದಂತೆ ತಾಳಿ ಕಟ್ಟುವುದು ಅತ್ಯಗತ್ಯ ಎಂದ ಪೀಠ ತಿಳಿಸಿದೆ. ಗಂಡ ಬದುಕಿರುವಾಗ ಹೆಂಡತಿ ತಾಳಿ ತೆಗೆಯುವುದಿಲ್ಲ.ತಾಳಿ ವೈವಾಹಿಕ ಜೀವನದ ಪವಿತ್ರವಾದ ಸಂಕೇತವಾಗಿದೆ. ಗಂಡನ ಮರಣದ ನಂತರ ತಾಳಿಯನ್ನ ತೆಗೆಯಬಹುದು ಎಂದು ತಿಳಿಸಿದೆ.
ಇದನ್ನೂ ಓದಿ : ಮಂಡ್ಯ, ಚಾಮರಾಜನಗರ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣ..! ಅಪಾಯ ಮಟ್ಟಕ್ಕೆ ಏರಿದ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ..!