ಮಂಗಳೂರು : ಇನ್ನೆರಡು ದಿನದಲ್ಲಿ ಮಂಗಳೂರು ಬ್ಲಾಸ್ಟ್ ಆರೋಪಿ ವಿಚಾರಣೆ ನಡೆಸಲಾಗುತ್ತಿದ್ದು, ಪೊಲೀಸರು ಶಾರಿಕ್ ಹೇಳಿಕೆ ದಾಖಲಿಸಲು ಸಜ್ಜಾಗಿದ್ಧಾರೆ. ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಾರಿಕ್ಗೆ ಟ್ರೀಟ್ಮೆಂಟ್ ನೀಡಲಾಗುತ್ತಿದೆ.
ಶಾರಿಕ್ ಮೊಹ್ಮದ್ ವೈದ್ಯರ ಜತೆ ಸ್ವಲ್ಪ-ಸ್ವಲ್ಪ ಮಾತನಾಡುತ್ತಿದ್ಧಾನೆ. ಪೊಲೀಸರು ವಿಚಾರಣೆ ಮಾಡಲು ಎರಡು ದಿನದಲ್ಲಿ ಅವಕಾಶ ನೀಡಲಾಗಿದೆ. ವಿಚಾರಣೆ ನಂತರ ಶಾರಿಕ್ನ ಮತ್ತಷ್ಟು ಸೀಕ್ರೆಟ್ ತಿಳಿಯಲಿದೆ. NIA ಶಾರಿಕ್ ವಿಚಾರಣೆ ಮಾಡಲು ತಯಾರಿ ಮಾಡಿಕೊಂಡಿದ್ಧಾರೆ. ಈಗಾಗಲೇ NIA ಮಂಗಳೂರಿನಲ್ಲಿ ತನಿಖೆ ಮಾಡುತ್ತಿದ್ದು, ಸ್ಫೋಟದ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ನಕಲಿ ಆಧಾರ್ ಕಾರ್ಡ್, ಸ್ಫೋಟಕ ಸೇರಿದಂತೆ ಹಲವು ವಿಚಾರ ತನಿಖೆ ನಡೆಯುತ್ತಿದೆ. ತನಿಖಾಧಿಕಾರಿ ಎಲ್ಲದರ ಬಗ್ಗೆ ಶಾರಿಕ್ ವಿಚಾರಣೆ ಮಾಡಬೇಕಿದೆ.
ಇದನ್ನೂ ಓದಿ :ಮದುವೆ ಪ್ರಿಪರೇಷನ್ನಲ್ಲಿ ನವ ಜೋಡಿ..? ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದೇ ವಸಿಷ್ಠ ಸಿಂಹ…!