ಪೊಲೀಸ್ ಅಂದ್ರೆ ಖಡಕ್. ಅದ್ರಲ್ಲೂ ಕಮಿಷನರ್ ಮಟ್ಟದ ಅಧಿಕಾರಿಗಳು ಇನ್ನೂ ಖದರ್ ಆಗಿರ್ತಾರೆ. ಹೀಗೆ ಖಡಲ್ ಆಫೀಸರ್ ಎನಿಸಿಕೊಂಡಿರೋ ಮಂಗಳೂರಿನ ನೂತನ ಕಮಿಷನರ್ ಶಶಿಕುಮಾರ್ ಸೊಗಸಾದ ಭಕ್ತಿ ಗೀತೆ ಹಾಡಿ ಮನಸೆಳೆದಿದ್ದಾರೆ.
ಮಂಗಳೂರು ಕಮೀಷನರ್ ಶಶಿಕುಮಾರ್ ಅವರು ಪಾಂಡೇಶ್ವರದ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಿದ್ದರು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಕೇಳುತ್ತಲೇ ಖುಷಿಗೊಂಡ ಅವರು ವೇದಿಕೆ ಏರಿ, ಭಕ್ತಿ ಗೀತೆ ಹಾಡುವ ಮೂಲಕ ಎಲ್ಲರನ್ನು ಹುಬ್ಬೇರಿಸಿದರು.
ತಾನು ಹಾಡಿ ರಂಜಿಸೋದಕ್ಕೂ ಸೈ, ಕರ್ತವ್ಯದ ವಿಚಾರಕ್ಕೆ ಬಂದಾಗ ಮುಲಾಜಿಲ್ಲದೇ ಕಾನೂನು ಕ್ರಮಕ್ಕೂ ಜೈ ಎನ್ನುವಂತೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಎಲ್ಲರನ್ನು ಹಾಡಿನ ಮೂಲಕ ರಂಜಿಸಿದ್ದಾರೆ. ಭಕ್ತಿಗೀತೆಯ ಹಾಡಿನ ಮೂಲಕ ಭಕ್ತಿ ಭಾವದ ಹೊಳೆಯನ್ನೇ ಹರಿಸಿದ್ದಾರೆ.
ಹೀಗೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರ ಭಕ್ತಿ ಗೀತೆಯ ಹಾಡು ಕೇಳಿದ ಜನರು, ಮೆಚ್ಚುಗೆ ವ್ಯಕ್ತ ಪಡಿಸಿದ್ದಲ್ಲದೇ, ಖಡಕ್ ಅಧಿಕಾರಿಯ ಜೊತೆಗೆ, ಸದಭಿರುಚಿಯ ಆಸಕ್ತಿಯ ಅಧಿಕಾರಿ ಎಂಬುದಾಗಿ ಹಾಡಿ ಹೊಗಳುವಂತಾಗಿದೆ.