ಮಂಗಳೂರು: ಮಳಲಿ ಮಸೀದಿ ಸರ್ವೆಗೆ ಮನವಿ ಮಾಡಲು ಹಿಂದೂ ಸಂಘಟನೆಗಳ ನಿರ್ಧಾರ ಮಾಡಿದ್ದು,
ತಾಂಬೂಲು ಪ್ರಶ್ನೆ ಮುಗಿದ ನಂತರ ಸರ್ವೆ ಬಗ್ಗೆ ಆಲೋಚನೆ ನಡೆಸಲಾಗುತ್ತಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ, ಈ ಸ್ಥಳದಲ್ಲಿ ದೈವ ಶಕ್ತಿ ಇತ್ತೆಂಬ ಭವಿಷ್ಯ ಹೊರಬಿದ್ದಿದೆ. ಶೈವ ಸನ್ನಿಧಿಯ ಬಗ್ಗೆ ಕೇರಳದ ದೈವಜ್ಞರು ಸತ್ಯ ಬಹಿರಂಗ ಮಾಡಿದ್ದಾರೆ.ಈ ಸ್ಥಳದಲ್ಲಿ ಏನಿತ್ತು ಎನ್ನುವ ಬಗ್ಗೆ ಖಂಡಿತವಾಗಿ ಶೋಧ ಆಗಬೇಕು, ಇದಕ್ಕಾಗಿ ಸರ್ವೆ ಮಾಡುವಂತೆ ಸರ್ಕಾರವನ್ನು ಕೋರುತ್ತೇವೆ.
ಮಳಲಿ ವಿವಾದದ ಬಗ್ಗೆ ಈಗಾಗಲೇ ಕಾನೂನು ಹೋರಾಟ ನಡೆಯುತ್ತಿದೆ, ಕೋರ್ಟ್ನಲ್ಲಿ ಎರಡೂ ಕಡೆಯವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ, ಕಾನೂನು ಮಾರ್ಗದಲ್ಲೇ ಎಲ್ಲಾ ನಿರ್ಧಾರ ಆಗಲಿ.ದಾಖಲೆಗಳ ಪರಿಶೀಲನೆ ನಂತರ ಸರ್ವೆ ನಡೆಯಬೇಕು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ:ಮಂಗಳೂರು ಮಸೀದಿಯಲ್ಲಿ ಶಿವ ಸನ್ನಿಧಿ..! ತಾಂಬೂಲ ಪ್ರಶ್ನೆಯಲ್ಲಿ ಬಯಲಾಯ್ತು ಸತ್ಯ..!