ಬೆಂಗಳೂರು: ಲಘು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಂಡ್ಯದ 5 ರೂಪಾಯಿ ಡಾಕ್ಟರ್ ಶಂಕರೇಗೌಡ ಅವರಿಗೆ ಇಂದು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಓಪನ್ ಹಾರ್ಟ್ ಸರ್ಜರಿ ಮಾಡಲಾಗಿದೆ.
ಶಂಕರೇಗೌಡ ಅವರಿಗೆ ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಓಪನ್ ಹಾರ್ಟ್ ಸರ್ಜರಿ ಮಾಡಲಾಗಿದೆ. ಮೇ. 23 ರಂದು ಶಂಕರೇಗೌಡರಿಗೆ ಲಘು ಹೃದಯಾಘಾತವಾಗಿತ್ತು, ಈ ಹಿನ್ನೆಲೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಹೃದಯದ ಮೂರು ರಕ್ತನಾಳಗಳು ಬ್ಲಾಕ್ ಆಗಿದ್ದರಿಂದ ತಾತ್ಕಾಲಿಕವಾಗಿ ಸ್ಟಂಟ್ ಅಳವಡಿಸಲಾಗಿತ್ತು. ವೈದ್ಯರು ನಂತರದ ದಿನಗಳಲ್ಲಿ ಬೈಪಾಸ್ ಸರ್ಜರಿ ಮಾಡುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದರು. ಇಷ್ಟು ದಿನ ಲವಲವಿಕೆಯಿಂದ ಚಿಕಿತ್ಸೆಗೆ ಸ್ಪಂದಿಸಿ ಆರಾಮವಾಗಿದ್ದ ಶಂಕರೇಗೌಡ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡ ಹಿನ್ನೆಲೆ ಮೇ 30ರಂದು ಡಿಸ್ಚಾರ್ಜ್ ಆಗಿದ್ದರು. ಹೃದ್ರೋಗ ತಜ್ಞರ ಸಲಹೆ ಮೇರೆಗೆ ಇದೀಗ ಶಂಕರೇಗೌಡರು ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ತೆಲಂಗಾಣದಲ್ಲಿ ಇಂದು ಎರಡು ರೈಲುಗಳಿಗೆ ಬೆಂಕಿ…! ರೈಲು ನಿಲ್ದಾಣದ ಅಂಗಡಿ, ಮಳಿಗೆಗಳನ್ನೂ ಪುಡಿ ಮಾಡಿದ ಕಿಡಿಗೇಡಿಗಳು..!