ಮೈಸೂರು : ಮೈಸೂರಿಗೆ ಕ್ಷಣಕ್ಷಣಕ್ಕೂ ನರಭಕ್ಷಕ ಹುಲಿ,ಚಿರತೆ ಆತಂಕದಲ್ಲಿದ್ದು, ಹುಲಿ, ಚಿರತೆ ಬೇಟೆಗೆ ಕೂಂಬಿಂಗ್ ಮುಂದುವರೆದಿದೆ. ಚಿರತೆ ಹೆಚ್.ಡಿ.ಕೋಟೆಯಲ್ಲಿ ಬಾಲಕನ ಬಲಿ ಪಡೆದಿದ್ದು, ಹುಲಿ ನಾಗರಹೊಳೆ ಬಳಿ ಯುವಕನ ತಿಂದು ಹಾಕಿದೆ. ಹುಣಸೂರು, ಕೊಡಗು ಡಿಸಿಎಫ್ ಸೇರಿ 10 ತಂಡ ರಚನೆ ಮಾಡಿದ್ದಾರೆ. ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗ ಕಂಪ್ಲೀಟ್ ಅಲರ್ಟ್ ಆಗಿದ್ದಾರೆ.
ಜಾಗೃತಿ ಮೂಡಿಸಲು ಅರಣ್ಯ ಇಲಾಖೆಯಿಂದ ಭಿತ್ತಿ ಪತ್ರಗಳ ಹಂಚಿಕೆ ಮಾಡಲಾಗಿದೆ. ಸಂಜೆ 6 ಗಂಟೆಯೊಳಗೆ ಎಲ್ಲರು ಮನೆ ಸೇರಿಕೊಳ್ಳಲು ಮನವಿ ಮಾಡಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಒಂಡಿಯಾಗಿ ಓಡಾಡಬೇಡಿ, ಯಾವುದೇ ಕಾರಣಕ್ಕೂ ಬಯಲು ಬಹಿರ್ದೆಸೆಗೆ ಹೋಗಬೇಡಿ. ಚಿರತೆ ಕಂಡಲ್ಲಿ ಹೆಚ್ಚು ಜನ ಸೇರಿ ಗದ್ದಲ ಮಾಡಬಾರದು, ಸಾಕು ಪ್ರಾಣಿಯನ್ನು ಹತ್ಯೆ ಮಾಡಿದಲ್ಲಿ ಅದನ್ನು ಮುಟ್ಟಬಾರದು ಎಂದು ಸೋಸಲೆ ಹೋಬಳಿಯ ಗ್ರಾಮಗಳಲ್ಲಿ ಭಿತ್ತಿ ಪತ್ರ ಹಂಚಿಕೆ ಮಾಡಲಾಗಿದೆ.
ಚಿರತೆ ಕಂಡರೆ ಸಹಾಯವಾಣಿ-9845772744,9945921926 ಕರೆ ಮಾಡಿ ಎಂದಿದ್ದಾರೆ. ಅರಣ್ಯ ಇಲಾಖೆ ಹುಲಿಗೆ ಬಲಿಯಾದ ಮಂಜು ಕುಟುಂಬಕ್ಕೆ 2.5 ಲಕ್ಷ ಪರಿಹಾರ ಪರಿಹಾರ ಘೋಷಣೆ ಮಾಡಿದೆ.
ಇದನ್ನೂ ಓದಿ : ಕಳೆದ 60 ವರ್ಷಗಳಿಂದ ದೇಶ ಲೂಟಿ ಹೊಡೆದಿದ್ದೇ ಕಾಂಗ್ರೆಸ್… ಯಾವುದೇ ಯೋಜನೆ ರೂಪಿಸಿದ್ರೂ ಅದರಲ್ಲಿ ಭ್ರಷ್ಟಾಚಾರ ಅಡಗಿತ್ತು : ಡಾ.ಸುಧಾಕರ್…