ಮೈಸೂರು: ಮೂರು ತಿಂಗಳಲ್ಲಿ ನಾಲ್ವರು ಬಲಿಯಾಗಿದ್ದು, ಟಿ.ನರಸೀಪುರದಲ್ಲಿ ನರಭಕ್ಷಕ ಚಿರತೆ ಆರ್ಭಟ ಜೋರಾಗಿದೆ. ಚಿರತೆ ಹೊಂಚು ಹಾಕಿ ಮನುಷ್ಯನ ರಕ್ತ ಹೀರುತ್ತಿದೆ.
ಚಿರತೆ ಹಿಡಿಯದ ಅಧಿಕಾರಿಗಳ ಮೇಲೆ ಜನರ ಆಕ್ರೋಶ ವ್ಯಕ್ತ ಪಡಿಸಿದ್ದು, ಬಾಲಕ ಬಲಿಯಾದ ಹೊರಳಹಳ್ಳಿಗೆ ಅರಣ್ಯ ಸಂರಕ್ಷಣಾಧಿಕಾರಿ ಭೇಟಿ ಕೊಟ್ಟಿದ್ದಾರೆ. ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಭೇಟಿ ಕೊಟ್ಟಿದ್ದು, ಸ್ಥಳೀಯ ಶಾಸಕ ಅಶ್ವಿನ್ ಕುಮಾರ್ ಸಾಥ್ ನೀಡಿದ್ದಾರೆ. ಚಿರತೆ ಹಿಡಿಯದ ಅಧಿಕಾರಿಗಳ ಮೇಲೆ ಜನರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನೂ ಸ್ಥಳಕ್ಕೆ ಭೇಟಿ ಕೊಟ್ಟು ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯ, 15 ವಿಶೇಷ ತಂಡಗಳನ್ನು ರಚನೆ ಮಾಡಿ ಹುಡುಕುತ್ತಿದ್ದೇವೆ, ಕ್ಯಾಮೆರಾಗಳನ್ನು ಬಿಟ್ಟು ಚಿರತೆ ಚಲನವಲ ನೋಡ್ತಿದ್ದೇವೆ
ತುಮಕೂರು ಗೇಜ್ ತಂದು ಚಿರತೆಗೆ ಬಲೆ ಹಾಕ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮುಂದುವರೆದ KMF ಹಾಲು ಪೂರೈಕೆದಾರರ ಮುಷ್ಕರ… ಕಳೆದ 2 ದಿನಗಳಿಂದ ಹಾಲು ಪೂರೈಕೆಯಲ್ಲಿ ವ್ಯತ್ಯಯ..