ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಮಹೇಶ್ ಬಾಬು ಇದ್ದಕ್ಕಿದ್ದಂತೆ ಈಗ ಡಿಪಿ ಬದಲಿಸಿದ್ದಾರೆ. ಮಹೇಶ್ ಬಾಬು ಅವರ ಹೊಸ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದು, ಅವರ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.
ಮಹೇಶ್ ಬಾಬು ಸದ್ಯ ಲಾಕ್ಡೌನ್ ನಿಂದ ಮನೆಯಲ್ಲೇ ಮಕ್ಕಳು ಹಾಗೂ ತಮ್ಮ ಸಾಕು ನಾಯಿಗಳ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಆಗಾಗ ಮಕ್ಕಳೊಂದಿಗೆ ತೆಗೆಸಿಕೊಂಡ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಿರುತ್ತಾರೆ. ಇದೀಗ ಮಹೇಶ್ ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆಯ ಡಿಪಿ ಬದಲಿಸಿದ್ದಾರೆ.
ಕ್ಲೀನ್ ಶೇವ್ ಮಾಡಿರುವ ಮಹೇಶ್, ಸಖತ್ ಇನ್ಟೆನ್ಸ್ ಲುಕ್ನಲ್ಲಿ ಪೋಸ್ ಕೊಟ್ಟಿದ್ದಾರೆ. ಸ್ಪೋಟ್ಸ್ ಟಿ-ಶರ್ಟ್ ತೊಟ್ಟಿರುವ ನಟ ಮಹೇಶ್ ಸ್ವಲ್ಪ ಸಣ್ಣಗಾಗಿದ್ದಾರೆ ಅನಿಸುತ್ತದೆ. ಇನ್ನು ಮಹೇಶ್ ಬಾಬು ಸರ್ಕಾರು ವಾರಿ ಪಾಟ ಸಿನಿಮಾಗಾಗಿ ಫುಲ್ ತಯಾರಿ ಮಾಡಿಕೊಳ್ತಿದ್ದಾರೆ ಅನಿಸುತ್ತೆ. ಅದಕ್ಕೆ ತೂಕ ಇಳಿಸಿಕೊಂಡವರಂತೆ ಕಾಣ್ತಿತ್ತೆ. ಅವರ ಹೊಸ ಡಿಪಿ ನೋಡಿದರೆ ಅವರು ಥೇಟ್ ಕ್ರೀಡಾಪಟುವಿನಂತೆ ಕಾಣಿಸುತ್ತಿದ್ದಾರೆ.
ಇನ್ನು ಆಗಸ್ಟ್ 9ಕ್ಕೆ ಮಹೇಶ್ ಬಾಬು ಹುಟ್ಟುಹಬ್ಬವಿದ್ದು, ಫ್ಯಾನ್ಸ್, ಅವರ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಕಾತುರದಿಂದ್ದ ಕಾಯುತ್ತಿದ್ದಾರೆ