ದೇಶದಾದ್ಯಂತ ಮಹಾಮಾರಿ ಕೊರೋನಾ ಹಾವಳಿಯಿಂದಾಗಿ ಇನ್ನು ಜನರು ಚೇತರಿಸಿಕೊಂಡಿಲ್ಲ ಅದಾಗಲೇ ಮಳೆರಾಯ ತನ್ನ ರೌದ್ರ ನರ್ತನದ ಪ್ರದರ್ಶನ ಮಾಡುತ್ತಿದ್ದಾನೆ.
ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಜನ ಜೀವನ ಅಸ್ತವ್ಯಸ್ತವಾಗಿದ್ದು. ವಾಸಕ್ಕೆ ಪರದಾಡುವಂತಾಗಿದೆ. ಹೊರಗೆ ಬರಲು ಸಾಧ್ಯವಾಗದೆ ಮನೆಯಲ್ಲಿಯೇ ಜಲ ದಿಗ್ಬಂದನರಾಗಿದ್ದಾರೆ.
ಇದನ್ನೂ ಓದಿ : ಸ್ಪಿನ್ ಬೌಲರ್ ಆಗಲಿದ್ದಾರೆ ವಿಜಯ್ ಸೇತುಪತಿ..! ಮುತ್ತಯ್ಯ ವಿಶ್ವ ದಾಖಲೆಯೇ ಈ ಸಿನಿಮಾದ ಶೀರ್ಷಿಕೆ..!
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸೇತುವೆ ಹಾಗೂ ಹಳ್ಳ ಜಿಲ್ಲಾದ್ಯಂತ ತುಂಬಿ ಹರಿಯುತ್ತಿದ್ದು, ಹರಿಯುತ್ತಿರುವ ಹಳ್ಳದಲ್ಲೇ ಸಾಹಸ ಪ್ರದರ್ಶಿಸಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುತ್ತಿದ್ದವರು ಟ್ರ್ಯಾಕ್ಟರ್ ಸಮೇತ ಡ್ರೈವರ್ ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ ಕರ್ಜಗಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ : ಬ್ಲಾಕ್ & ಪಿಂಕ್ ಸೆಲ್ವಾರ್ನಲ್ಲಿ ಕ್ಯೂಟ್ ಸ್ಮೈಲ್ ..! ಸದ್ಯ ಅಮೃತಾಳದ್ದೇ ಹವಾ ಸೋಷಿಯಲ್ ಮೀಡಿಯಾಗಳಲ್ಲಿ..!
ಕರ್ಜಗಿ ನಿವಾಸಿ ಪರಮೇಶ್ವರ ದಾಯ್ಗೋಡೆ ಹಳ್ಳದಲ್ಲಿ ಕೊಚ್ಚಿ ಹೋದ ಟ್ರಾಕ್ಟರ್ ಡ್ರೈವರ್. ಇನ್ನು ಕೊಚ್ಚಿ ಹೋಗುತ್ತಿರುವ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಟ್ರ್ಯಾಕ್ಟರ್ ನಲ್ಲಿ ಹಾಲಿನ ಕ್ಯಾನ್ ಗಳನ್ನ ತೆಗೆದುಕೊಂಡು ಹೋಗುತ್ತಿದ್ದ ಡ್ರೈವರ್ ಹಳ್ಳದ ಪಾಲಾಗಿದ್ದಾನೆ. ಇನ್ನು ಟ್ರ್ಯಾಕ್ಟರ್ ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಈಜಿ ಪಾರಾಗಿದ್ದಾನೆ.
ಇದನ್ನೂ ಓದಿ : ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ…ಟ್ರಾಫಿಕ್ ಪೊಲೀಸರಿಗೇನೆ ಡಿಕ್ಕಿ..! ನಂತರ ಸಿಕ್ಕಿಬಿದ್ದಿದ್ದೇಗೆ ಕಾರ್ ಚಾಲಕ..?
https://youtu.be/yinMQSxX-ug