ಮುಂಬೈ : ಮಹಾರಾಷ್ಟ್ರದಲ್ಲಿ ಕ್ಷಣಕ್ಕೊಂದು ಡೆವಲಪ್ಮೆಂಟ್ ಆಗುತ್ತಿದ್ದು, ಉದ್ಧವ್ ಠಾಕ್ರೆ ಸಿಎಂ ನಿವಾಸ ತೊರೆದಿದ್ದಾರೆ.
ಉದ್ಧವ್ ಠಾಕ್ರೆ ಮಡದಿ, ಮಕ್ಕಳು, ಲಗೇಜ್ ಸಮೇತ ಅಧಿಕೃತ ನಿವಾಸ ತೊರೆದು ಮಾತೋಶ್ರೀಗೆ ತೆರಳಿದ್ದಾರೆ. ದಾರಿಯುದ್ಧಕ್ಕೂ ಉದ್ಧವ್ ಠಾಕ್ರೆ ಬೆಂಬಲಿಗರು ಜೈಕಾರ ಹಾಕಿದ್ದಾರೆ. ರಾಜೀನಾಮೆ ಕೊಡಬೇಡಿ ಎಂದು ಬೆಂಬಲಿಗರ ಒತ್ತಾಯ ಮಾಡಿದ್ದಾರೆ. ಠಾಕ್ರೆ ಸಂಜೆಯಷ್ಟೇ ರಾಜೀನಾಮೆಗೆ ಸಿದ್ಧ ಎಂದಿದ್ದರು. CM ಆಗಲು ನಾನು ಬಯಸಿರಲಿಲ್ಲ, ನಂಗೆ ಅಧಿಕಾರದ ಆಸೆ ಇಲ್ಲ.. ಒಬ್ಬ ಶಾಸಕ ನನ್ನೆದುರು ರಾಜೀನಾಮೆ ಕೇಳಿದ್ರೆ ಕೊಡ್ತೀನಿ ಎಂದಿದ್ದಾರೆ.
ಶರದ್ ಪವಾರ್ ಶಿಂಧೆಯನ್ನೇ ಸಿಎಂ ಮಾಡುವಂತೆ ಸಲಹೆ ನೀಡಿದ್ದಾರೆ. ಪವಾರ್ ಸರ್ಕಾರ ಉಳಿಸೋ ತಂತ್ರಕ್ಕೆ ಓಕೆ ಅಂತಾ ಉದ್ಧವ್ ಠಾಕ್ರೆ..? ಸರ್ಕಾರದ ಜೊತೆಗೆ ಪಕ್ಷದ ಮೇಲಿನ ಹಿಡಿತ ಕಳೆದುಕೊಳ್ಳುವ ಭೀತಿಯಲ್ಲಿದೆ. ರಿಸೈನ್ ಮಾಡದೇ ಇದ್ರೆ ಶಿವಸೇನೆ ಇಬ್ಬಾಗವಾಗೋ ಭೀತಿಯಿದೆ.
ಇದನ್ನೂ ಓದಿ :ರಾಜ್ಯದಲ್ಲಿ ನಿಲ್ಲದ ಪಠ್ಯಪುಸ್ತಕ ಪರಿಷ್ಕರಣೆ ಸಂಘರ್ಷ… ವಿಶೇಷ ಸುದ್ದಿಗೋಷ್ಠಿ ಕರೆದ ಕಂದಾಯ ಸಚಿವ R. ಅಶೋಕ್…