ಮುಂಬೈ : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತುರ್ತು ಮೀಟಿಂಗ್ ಕರೆದಿದ್ದು, ಬೆಳಗ್ಗೆ 11.30ಕ್ಕೆ ಸಭೆ ನಡೆಸಲಿದ್ದಾರೆ. ಶಿವಸೇನೆ ಶಾಸಕರು, ಸಂಸದರು, ಎಂಎಲ್ಸಿಗಳ ಜೊತೆ ಮೀಟಿಂಗ್ ನಡೆಸಲಿದ್ಧಾರೆ.
ಸಭೆಯು ಮಾತೋಶ್ರೀ ನಿವಾಸದಲ್ಲಿ ನಡೆಯಲಿದೆ. ಮತ್ತಷ್ಟು ಶಾಸಕರು ಶಿಂಧೆ ಟೀಂ ಸೇರಿಕೊಂಡಿರೋ ಹಿನ್ನೆಲೆ ಸಭೆ ನಡೆಸಲಾಗುತ್ತಿದೆ. ನಿನ್ನೆ ಮೂವರು ಶಿವಸೇನೆ ಶಾಸಕರು ಸೂರತ್ಗೆ ಪ್ರಯಾಣ, ಗುವಾಹಟಿಗೆ ಮೂವರು ಶಾಸಕರು ತೆರಳುತ್ತಿದ್ದಂತೆ ಶೇಕ್ ಆಗಿದ್ದಾರೆ. ಒಂದೆಡೆ ಶಿವಸೇನೆ ಮೀಟಿಂಗ್, ಮತ್ತೊಂದೆಡೆ ಎನ್ಸಿಪಿ ಮೀಟಿಂಗ್ ನಡೆಯುತ್ತಿದೆ. ಶರದ್ ಪವಾರ್ ಬೆಳಗ್ಗೆ 11 ಗಂಟೆಗೆ ಸಭೆ ನಡೆಸಲಿದ್ದಾರೆ. ನಾಯಕರು ಸರ್ಕಾರ ಉಳಿಸಿಕೊಳ್ಳಲು ರಣತಂತ್ರ ರೂಪಿಸುತ್ತಿದ್ದಾರೆ.
ಈಗಾಗಲೇ ಠಾಕ್ರೆ ಸಿಎಂ ಅಧಿಕೃತ ನಿವಾಸ ಹರ್ಷಾ ತೊರೆದಿದ್ದಾರೆ. ರಾತ್ರಿಯೇ ಪತ್ನಿ, ಪುತ್ರ, ಲಗೇಜ್ ಸಮೇತ ಮಾತೋಶ್ರೀಗೆ ಶಿಫ್ಟ್ ಆಗಿದ್ದಾರೆ.
ಇದನ್ನೂ ಓದಿ : ಹಾಸನ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವ..! ನಿದ್ದೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಭೂ ಕಂಪನ..!