ಈ ವರೆಗೂ ಕಾಡಿನಂಚಿನ ಪ್ರದೇಶಗಳಿಗೆ ದಾಳಿ ನಡೆಸುತ್ತಿದ್ದ ಚಿರತೆಗಳು ಈಗ ನಗರದತ್ತ ತನ್ನ ಲಗ್ಗೆ ಇಡುತ್ತಿವೆ. ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಚಿರತೆ ಪತ್ತೆಯಾಗಿ ಆತಂಕ ಮೂಡಿಸಿದೆ. ಗಿರಿನಗರ ಪೊಲೀಸ್ ಠಾಣೆಯ ವೀರಭದ್ರನಗರ ಗುಡ್ದೆಯಲ್ಲಿ ಚಿರತೆ ಸಂಚಾರ ಮಾಡಿದೆ.
ಡಿಸೆಂಬರ್ 5ರಂದು ಚಿರತೆ ಗೋಚರಿಸಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿತ್ತು. ಪಟೇಲ್ ಅನಂತಸ್ವಾಮಿ ಎಂಬುವರಿಗೆ ಸೇರಿದ್ದ ಶೆಡ್ನಲ್ಲಿದ್ದ ಕುರಿ ಹಾಗೂ ಮೇಕೆ ಮರಿಗಳ ರಕ್ತ ಹೀರಿ ಚಿರತೆ ಪರಾರಿ ಆಗಿದೆ. ಇದ್ರಿಂದ 17ಕ್ಕೂ ಹೆಚ್ಚು ಕುರಿ ಹಾಗೂ ಮೇಕೆ ಮರಿಗಳು ಸಾವನ್ನಪ್ಪಿದ್ದವು. ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದೀಗ ಗಿರಿನಗರದಲ್ಲಿ ಚಿರತೆ ಓಡಾಡೋ ದೃಶ್ಯಗಳು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಮನೆಯಂಗಳಕ್ಕೂ ಬಂದಿರುವ ಚಿರತೆ ಆಹಾರವನ್ನು ಅರಸುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಇದ್ರಿಂದಾಗಿ ಗಿರಿನಗರ ವ್ಯಾಪ್ತಿಯಲ್ಲಿ ಆತಂಕ ಮೂಡಿದೆ.