ಮೈಸೂರು: ಚಿರತೆ ಸೆರೆ ಹಿಡಿಯಲು ಸೂಚನೆ ನೀಡಿದ್ದೇನೆ, ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ವಿಶೇಷ ಪಡೆಗಳನ್ನು ಬಳಸಿ ಸೆರೆ ಹಿಡಿಯಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಚಿರತೆ ದಾಳಿ ಮಾಡಿದ ಐದಾರು ಕಿಮೀ ದೂರದಲ್ಲಿ ವಿಶೇಷ ನಿಗಾ, ಸಂಜೆ ನಂತರ ಜನರು ಮನೆಯಿಂದ ಹೊರ ಬರುವುದು ಬೇಡ, ತ್ವರಿತ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.