ಹೆರಿಗೆ ಮಾಡಿಸಲು 500 ರೂಪಾಯಿ ಲಂಚ ಪಡೆದ ಕೆಸಿ ಜನರಲ್ ಆಸ್ಪತ್ರೆ ನರ್ಸ್ ಕೋಕಿಲಾ ಅರೆಸ್ಟ್ ಮಾಡಿರೋ ಎಸಿಬಿ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇವಲ 500 ರೂಪಾಯಿ ಲಂಚ ಪಡೆದರು ಎಂದು ಎಸಿಬಿ ಪೊಲೀಸರು ಕ್ರಮ ಕೈಗೊಂಡಿರುವುದು ಇದೀಗ ಎಸಿಬಿ ಮೇಲೆ ಆಕ್ರೋಶ ಮೂಡಿಸಿದೆ. 500 ರೂ. ಲಂಚ ಪಡೆದಿದ್ದಕ್ಕಾಗಿ ಅರೆಸ್ಟ್ ಮಾಡಿದ್ದೇವೆ ಎಂದು ಎಸಿಬಿ ಪ್ರೆಸ್ನೋಟ್ ರಿಲೀಸ್ ಮಾಡಿದೆ.
ಕೃಷ್ಣ ಜಲಭಾಗ್ಯ ನಿಗಮದಲ್ಲಿ 800 ಕೋಟಿ ರೂಪಾಯಿ ಅಕ್ರಮ ಕಾಮಗಾರಿ ಮಾಡಿ ಉಪ್ಪಾರ್ ಕಂಟ್ರಾಕ್ಟರ್ ರಾಜಾರೋಷವಾಗಿ ಓಡಾಡ್ತಿದ್ದಾರೆ. ಡಿವೈ ಉಪ್ಪಾರ್ ಕಂಪನಿ ವಿರುದ್ಧ ಶಾಸಕರು ಬೊಬ್ಬೆ ಹೊಡೆದ್ರೂ ಎಸಿಬಿ ತಿರುಗಿ ನೋಡ್ತಿಲ್ಲ. ಮತ್ತೊಂದೆಡೆ ಕೆ.ಆರ್ ಪೇಟೆಯಲ್ಲಿ ಮಹಾನುಭಾವ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೋಟಿ ಕೋಟಿ ಲೂಟಿ ಹೊಡೆದಿರೋ ಬಗ್ಗೆ ದೂರು ದಾಖಲಾಗಿದ್ದರು ಎಸಿಬಿ ಕಣ್ಣುಮುಚ್ಚಿ ಕುಳಿತಿದೆ.
BDAನಲ್ಲಿ ಬಹಿರಂಗ ಹಗರಣ ನಡೆಯುತ್ತಿದೆ. BBMPಯಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಇಂಧನ ಇಲಾಖೆಯಲ್ಲಿ ಸಾವಿರಾರು ಕೋಟಿ ನುಂಗುತ್ತಿದ್ದಾರೆ. PWD ಇಲಾಖೆಯಲ್ಲಿ ನಕಲಿ ಬಿಲ್ ಲೂಟಿ ನಡೆಯುತ್ತಿದೆ. ಸಬ್ ರಿಜಿಸ್ಟರ್ಗಳು ಮತ್ತು RTOಗಳು ಮನಬಂದಂತೆ ಲಂಚ ಪಡೆಯುತ್ತಿದ್ದಾರೆ. ಎಸಿಬಿ ಅಧಿಕಾರಿಗಳೇ ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ಲವಾ..?
500 ರೂಪಾಯಿ ಪಡೆದ ನರ್ಸ್ ಬಂಧಿಸಿದ್ದೇವೆ ಅಂತಿದ್ದೀರಲ್ಲ. 500 ಕೋಟಿ ತಿಂದವರನ್ನು ಏಕೆ ಬಿಟ್ಟಿದ್ದೀರಿ ಎಂದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.