ಬೆಳಗಾವಿ : ಯಾರೂ ಯಾಮಾರಬೇಡಿ.. ನಾನು ಯಾವ ಪಂಚಾಯ್ತಿ ಸದಸ್ಯರನ್ನೂ ಟೂರ್‌ಗೆ ಕಳಿಸ್ತಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ವಿಡಿಯೋ ರಿಲೀಸ್ ಮಾಡಿರುವ ಹೆಬ್ಬಾಳ್ಕರ್ ಅವರು ‘ನಾನು ಯಾವ ಪಂಚಾಯ್ತಿ ಸದಸ್ಯರನ್ನೂ ಟೂರ್‌ಗೆ ಕಳುಹಿಸುತ್ತಿಲ್ಲ, ಹೆಬ್ಬಾಳ್ಕರ್ ಟೂರ್‌ಗೆ ಕಳುಹಿಸುತ್ತಿದ್ದಾರೆ ಅಂತಾ ಕೆಲವರು ವದಂತಿ ಹರಡುತ್ತಿದ್ದಾರೆ. ಯಾರೂ ಯಾಮಾರಬೇಡಿ, ನಾನು ಯಾರನ್ನೂ ಟೂರ್‌ಗೆ ಕಳುಹಿಸುತ್ತಿಲ್ಲ, ಇಲ್ಲೇ ಇರಿ. ಅಂಬೇಡ್ಕರ್ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಮನವಿ ಮಾಡಿದ್ಧಾರೆ.
ಯಾವುದೇ ಒತ್ತಡಕ್ಕೆ, ಯಾವುದೇ ಧಮ್ಕಿಗೆ ಹೆದರೋ ಅವಶ್ಯಕತೆ ಇಲ್ಲ ನ್ಯಾಯಯುತವಾದ ಚುನಾವಣೆ ನಡೆಸೋಣ. ನನಗೆ ಸಹಾಯ ಮಾಡಿ ನಿಮ್ಮ ಮನೆ ಮಗಳಾಗಿ ಯಾವತ್ತೂ ಇರುತ್ತೀನಿ, ನನಗೆ ಸಹಕಾರ ಕೊಡಿ. ನನ್ನ ತಮ್ಮ, ನನ್ನ ಪಕ್ಷ, ನನ್ನ ಕಾಂಗ್ರೆಸ್ ಮುಖಂಡರು ನಿಮ್ಮ ಜೊತೆಗಿರುತ್ತಾರೆ. ಸತೀಶ್ ಜಾರಕಿಹೊಳಿ ಆಶೀರ್ವಾದ, ಪ್ರಕಾಶ್ ಹುಕ್ಕೇರಿ ಆಶೀರ್ವಾದವೂ ಇದ್ದು, ಮುಖಂಡರ ಆಶೀರ್ವಾದ ನಮ್ಮ ಜೊತೆಗಿರುವಾಗ ಹೆದರೋ ಅವಶ್ಯಕತೆ ಇಲ್ಲ ಎಂದು ಜೈ ಚೆನ್ನಮ್ಮ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹಂಪಿಗೆ ಬರುವ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ; ಡಿಸಿ ಅನಿರುದ್ಧ್ ಶ್ರವಣ್