ಬೆಂಗಳೂರು: ಬೆಂಗಳೂರಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಲೇಡಿ ಡ್ರೈವರ್ ಅನ್ನು ಅರೆಸ್ಟ್ ಮಾಡಲಾಗಿದೆ. ಯುವತಿ ವಿರುದ್ಧ IPC ಸೆಕ್ಷನ್ 307 ಅಡಿ FIR ದಾಖಲಾಗಿದೆ.
ಆರೋಪಿ ಪ್ರಿಯಾಂಕ ಮೇಲೆ 307 ಅಡಿ ಕೊಲೆಯತ್ನ ಕೇಸ್ ದಾಖಲಾಗಿದೆ. ಬೈಕ್ಗೆ ಡಿಕ್ಕಿ ಹೊಡೆದಿದ್ದನ್ನ ಪ್ರಶ್ನಿಸಿದ್ದಕ್ಕೆ ಯುವತಿ ಹುಚ್ಚಾಟ ಮೆರೆದಿದ್ದು, ಬೈಕ್ ಸವಾರನಿಗೆ ಮಿಡ್ಲ್ ಫಿಂಗರ್ ತೋರಿಸಿದ ಯುವತಿ,
ಬೈಕ್ ಸವಾರ ಕಾರ್ ಬ್ಯಾನೆಟ್ ಮೇಲೆ ಹತ್ತಿ ಪ್ರಶ್ನೆ ಮಾಡಿದ್ದು, ಈ ವೇಳೆ ಹೆದರಿದ ಯುವತಿಯಿಂದ ಏಕಾಏಕಿ ಕಾರು ಚಾಲನೆ ಮಾಡಲಾಗಿತ್ತು. ಕಾರ್ ಬ್ಯಾನೆಟ್ ಮೇಲೆ ಹತ್ತಿದ್ರೂ ಕೇರ್ ಮಾಡದ ಯುವತಿ, 2 ಕಿಲೋ ಮೀಟರ್ ಬೈಕ್ ಸವಾರನನ್ನ ಲೇಡಿ ಡ್ರೈವರ್ ಹೊತ್ತೊಯ್ದಿದ್ದರು. ಬೆಂಗಳೂರಿನ ಉಲ್ಲಾಳ ರಸ್ತೆಯ ಮಂಗಳೂರು PU ಕಾಲೇಜ್ ಬಳಿ ಈ ಘಟನೆ ನಡೆದಿದ್ದಾರೆ.