ಕುವೈತ್ ಸಿಟಿ: ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಕಳೆದ ಶುಕ್ರವಾರ ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು. ಇದೇ ವೇಳೆ ವಿಶ್ವದ ಹಲವೆಡೆಯೂ ಪ್ರತಿಭಟನೆ ನಡೆದಿತ್ತು, ಕುವೈತ್ ನಲ್ಲೂ ಸಹ ಭಾರತೀಯ ಮುಸ್ಲಿಮರು ಮತ್ತು ಏಷ್ಯಾದ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಡೆಸಿದ್ದವರಿಗೆ ಬಿಗ್ ಶಾಕ್ ನೀಡಲು ಕುವೈತ್ ಸರ್ಕಾರ ಮುಂದಾಗಿದೆ.
ಕುವೈತ್ ನಲ್ಲಿ ಪ್ರತಿಭಟನೆ, ಧರಣಿ ನಡೆಸಲು ಅವಕಾಶವಿಲ್ಲ. ಆದರೆ ಕುವೈತ್ ನಲ್ಲಿರುವ ಹಲವು ಭಾರತೀಯ ಮುಸ್ಲಿಮರು ಮತ್ತು ಏಷ್ಯಾದ ರಾಷ್ಟ್ರಗಳ ಮುಸ್ಲಿಮರು ಶುಕ್ರವಾರ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕುವೈತ್ ಸರ್ಕಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರನ್ನು ಬಂಧಿಸಿ ಗಡಿಪಾರು ಮಾಡಲು ನಿರ್ಧರಿಸಿದೆ.
Expats who took part in Fahaheel protest to be deported#Kuwait #Expats #India #ProphetMuhammad #NupurSharma #Nupur_Sharma #Muslimshttps://t.co/Q9nrvNRhHu
— ARAB TIMES – KUWAIT (@arabtimeskuwait) June 11, 2022
ಅಧಿಕಾರಿಗಳು ಈಗಾಗಲೇ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನು ಗುರುತಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವೀಸಾವನ್ನು ರದ್ದುಗೊಳಿಸಲಾಗುವುದು ಮತ್ತು ಅವರ ದೇಶಗಳಿಗೆ ಗಡಿಪಾರು ಮಾಡಲಾಗುವುದು. ಜೊತೆಗೆ ಅವರು ಮತ್ತೆ ಕುವೈತ್ ಪ್ರವೇಶಿಸದಂತೆ ಆಜೀವ ನಿಷೇಧ ಹೇರಲಾಗುವುದು. ಜೊತೆಗೆ ಪ್ರತಿಭಟನೆಯಲ್ಲಿ ಯಾರಾದರೂ ಕುವೈತ್ ನಾಗರಿಕರು ಪಾಲ್ಗೊಂಡಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.