ಬೆಂಗಳೂರು: ಮಳೆಯಿಂದಾಗಿ ನಿನ್ನೆ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಹಣದ 50% ಮೊತ್ತವನ್ನು ವಾಪಸ್ ನೀಡುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ತಿಳಿಸಿದೆ.
5 ಪಂದ್ಯಗಳ ಸರಣಿಯ ಕೊನೆಯ ಪಂದ್ಯ ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 3.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು. ಈ ಹಂತದಲ್ಲಿ ಮಳೆ ಸುರಿದಿದ್ದರಿಂದ ಪಂದ್ಯವನ್ನು ನಿಲ್ಲಿಸಲಾಗಿತ್ತು. ಮಳೆ ನಿಲ್ಲದೆ ಇದ್ದಿದ್ದರಿಂದ ಅಂತಿಮವಾಗಿ ಪಮದ್ಯವನ್ನು ರದ್ದುಗೊಳಿಸಲಾಯಿತು.
🚨 Update 🚨
Play has heen officially called off.
The fifth & final @Paytm #INDvSA T20I has been abandoned due to rain. #TeamIndia pic.twitter.com/tQWmfaK3SV
— BCCI (@BCCI) June 19, 2022
ರೋಚಕ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಸ್ಟೇಡಿಯಂ ಗೆ ಬಂದಿದ್ದ ಪ್ರೇಕ್ಷಕರಿಗೆ ಇದರಿಂದ ನಿರಾಸೆಯಾಗಿತ್ತು.ಈ ಹಿನ್ನೆಲೆಯಲ್ಲಿ KSCA ಅಧಿಕಾರಿಗಳು ಟಿಕೆಟ್ ಹಣದ 50% ವಾಪಸ್ ನೀಡಲು ತೀರ್ಮಾನಿಸಿದ್ದಾರೆ.
ಮಳೆಯಿಂದಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ರದ್ದಾಗಿತ್ತು. ಪಂದ್ಯದಲ್ಲಿ ಕೇವಲ 3.3 ಓವರ್ ಗಳ ಆಟ ಮಾತ್ರ ಆಡಲಾಗಿತ್ತು. ನಿಯಮಾವಳಿಗಳ ಪ್ರಕಾರ ಕೇವಲ ಒಂದೇ ಒಂದು ಬಾಲ್ ಎಸೆದಿದ್ದರೂ ಟಿಕೆಟ್ ಹಣ ರೀಫಂಡ್ ಮಾಡುವುದಿಲ್ಲ. ಆದರೆ ಅಭಿಮಾನಿಗಳಿಗಾಗಿ ಈ ಬಾರಿ ಟಿಕೆಟ್ ಹಣದ 50% ರಷ್ಟನ್ನು ರೀಫಂಡ್ ಮಾಡಲು ನಿರ್ಧರಿಸಲಾಗಿದೆ. ರೀಫಂಡ್ ನ ದಿನಾಂಕ ಮತ್ತು ಸ್ಥಳವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಹಣ ನೀಡಿ ಖರೀದಿಸಿರುವ ಟಿಕೆಟ್ ಗಳನ್ನು ಪ್ರೇಕ್ಷಕರು ರೀಫಂಡ್ ವೇಳೆ ನೀಡಬೇಕಾಗುತ್ತದೆ ಎಂದು KSCA ನ ಖಜಾಂಚಿ ಮತ್ತು ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.