ಬೆಂಗಳೂರು : ಕೊಮ್ಮಘಟ್ಟದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಕೊಮ್ಮಘಟ್ಟದಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ಮೋದಿ ಬೆಂಗಳೂರು ವಿವಿಯಲ್ಲಿನ ಕಾರ್ಯಕ್ರಮ ಬಳಿಕ ಕೊಮ್ಮಘಟ್ಟದತ್ತ ಹೋಗಲಿದ್ಧಾರೆ. ವಿವಿಯಿಂದ ರಸ್ತೆ ಮಾರ್ಗವಾಗಿ ಕೊಮ್ಮಘಟ್ಟಕ್ಕೆ ಬರಲಿದ್ದಾರೆ. 15 ಸಾವಿರ ಕೋಟಿ ವೆಚ್ಚದ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ಧಾರೆ. ಬೆಂಗಳೂರು ಹೊರವಲಯಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ, 6 ರೈಲ್ವೆ ಯೋಜನೆಗಳಿಗೆ ಚಾಲನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳ ಬಳಿಕ ಕೊಮ್ಮಘಟ್ಟದಿಂದ ಮೈಸೂರಿಗೆ ಪಯಣ ನಡೆಸಲಿದ್ದಾರೆ. ನಾಳೆ ಸಂಜೆನೇ ವಿಶೇಷ ಹೆಲಿಕಾಪ್ಟರ್ ಮೂಲಕ ಮೈಸೂರಿನತ್ತ ಸಾಗಲಿದ್ದಾರೆ.
ಇದನ್ನೂ ಓದಿ : ಅಗ್ನಿಪಥ್ ವಿರುದ್ಧದ ಹೋರಾಟ ರಾಜಕೀಯ ಪ್ರೇರಿತ… ಕಾಂಗ್ರೆಸ್ ಉರಿಯೋ ಬೆಂಕಿಗೆ ತುಪ್ಪ ಸುರಿಯುತ್ತಿದೆ : ಸಿಎಂ ಬೊಮ್ಮಾಯಿ ವಾಗ್ದಾಳಿ…!