ಕೋಲಾರ: ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ (international yoga day) ಕೋಲಾರದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಕೋಲಾರದ ಅಂತರಗಂಗೆ ಐತಿಹಾಸಿಕ ಯೋಗ ದಿನಕ್ಕೆ ಸಾಕ್ಷಿಯಾಗಲಿದೆ.
ಕೋಲಾರದ ಅಂತರಗಂಗೆಯ ತೇರಹಳ್ಳಿ ಬೆಟ್ಟದಲ್ಲಿ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಯೋಗ ದಿನಾಚರಣೆಗೆ ಸಿದ್ಧತೆ ನಡೆಯುತ್ತಿದೆ. ತೇರಹಳ್ಳಿ ಬೆಟ್ಟದ ವಿಶಾಲವಾದ ಜಾಗದಲ್ಲಿ ನಿಸರ್ಗದ ನಡುವೆ ಯೋಗ ದಿನಾಚರಣೆ ನಡೆಯಲಿದೆ. ಯೋಗ ದಿನಾಚರಣೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕರು, ಯೋಗ ಪಟುಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ನಮೋಗಾಗಿ ವಿಶೇಷ ಮೈಸೂರು ಪೇಟ.. ! ಮೋದಿಯ ತಲೆಯ ಮೇಲೆ ಇಂದು ಮೀರ ಮೀರ ರಾರಾಜಿಸುವ ಆಕರ್ಷಕ ಪೇಟ..!
ಈ ಹಿನ್ನೆಲೆಯಲ್ಲಿ ಇಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಅವರು ಯೋಗ ದಿನಾಚರಣೆ ನಡೆಯಲಿರುವ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿದರು. ಪೊಲೀಸರು ಯೋಗ ದಿನಾಚರಣೆಗೆ ಬಿಗಿ ಭದ್ರತೆ ಒದಗಿಸಿದ್ದಾರೆ.