ತುಮಕೂರು: ತುಮಕೂರು ಉಸ್ತುವಾರಿ ಸಚಿವರಾಗಿ ಮಾಧುಸ್ವಾಮಿ ಅವರು ಒಳ್ಳೆಯ ಕೆಲಸ ಮಾಡಿದ್ದರು. ಅವರು ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ನಲ್ಲಿ ಗರಿಗೆದರಿದ ಪಾಲಿಟಿಕ್ಸ್… ಶಾಸಕ ರಿಜ್ವಾನ್ ಅರ್ಷದ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ…
ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ ಅವರು ಮಾಧುಸ್ವಾಮಿ ಕಾಂಗ್ರೆಸ್ ಗೆ ಬಂದರೆ ಅಡ್ಡಿಯಿಲ್ಲ. ಬೇರೆಯವರಂತೆ ತಮ್ಮ ಕ್ಷೇತ್ರವನ್ನು ಮಾತ್ರ ಅಭಿವೃದ್ಧಿ ಮಾಡಿಕೊಂಡಿಲ್ಲ. ಅವರು ಬಂದರೆ ಪಕ್ಷಕ್ಕೆ ಶಕ್ತಿ ಬರುತ್ತೆ ಅಂದರೆ ಯಾಕೆ ಬೇಡ ಅನ್ನೋಣ? ಮಾಧುಸ್ವಾಮಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ನಿರ್ಣಯ ಕೆಪಿಸಿಸಿ ಅಧ್ಯಕ್ಷರು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ತುಮಕೂರು ಉಸ್ತುವಾರಿ ಸಚಿವ ಸ್ಥಾನ ನೇಮಕ ವಿಚಾರದಲ್ಲಿ ಬೇಸರಗೊಂಡಿರುವ ಮಾಧುಸ್ವಾಮಿ ಅವರು ಕಾಂಗ್ರೆಸ್ ನೀಡಿದ ಆಹ್ವಾನವನ್ನು ಸ್ವೀಕರಿಸುತ್ತಾರಾ? ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗುತ್ತಾರಾ ಮಾಧುಸ್ವಾಮಿ? ರಾಜಣ್ಣ ಅವರ ಮಾತಿನ ಅರ್ಥವೇನು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.