ಬೆಂಗಳೂರು: ಬೆಂಗಳೂರಿನಲ್ಲಿ ಕಿರಿಕ್ ಕೀರ್ತಿ ಮೇಲೆ ಹಲ್ಲೆಯಾಗಿದೆ. ಪಬ್ ನಲ್ಲಿ ಗಲಾಟೆ ಆದ ಹಿನ್ನಲೆ ಬಿಯರ್ ಬಾಟಲ್ನಿಂದ ಕಿರಿಕ್ ಕೀರ್ತಿಗೆ ಅಪರಿಚಿತ ಥಳಿಸಿದ್ದಾನೆ. ಮೇಖ್ರಿ ಸರ್ಕಲ್ ಬಳಿ ಇರುವ ಹ್ಯಾಮರ್ಡ್ ಪಬ್ ನಲ್ಲಿ ತಡರಾತ್ರಿ 11 : 30ರಲ್ಲಿ ಈ ಘಟನೆ ನಡೆದಿದ್ದು, ಅಭಿಮಾನದಿಂದ ಪಕ್ಕದ ಟೇಬಲ್ ನಲ್ಲಿದ್ದ ವ್ಯಕ್ತಿ ಫೊಟೋ ತೆಗೆದುಕೊಂಡಿದ್ದು, ಫೊಟೋ ಯಾಕೆ ತೆಗೆದುಕೊಂಡೆ ಎಂದು ಕಿರಿಕ್ ಕೀರ್ತಿ ಕೇಳಿದ್ದಕ್ಕೆ ಸಿಟ್ಟಾದ ವ್ಯಕ್ತಿ ಕೀರ್ತಿಗೆ ಹೊಡೆದಿದ್ದಾನೆ ಹಲ್ಲೆ ನಡೆಸಿರುವ ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 324 ನಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ರೈಲ್ವೆ ಸ್ಟೇಷನ್ನಲ್ಲಿ ಫಿಶ್ ಫೂಟ್ ಸ್ಪಾ…! ರೈಲಿಗೆ ಕಾಯುವ ಪ್ರಯಾಣಿಕರ ಪಾದಗಳಿಗೆ ಮೀನುಗಳು ಮಸಾಜ್ ಮಾಡಲಿವೆ..!