ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ‘ರನ್ನ’ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಮೋಡಿ ಮಾಡಿದ್ರು. ಆನ್ಸ್ಕ್ರೀನ್ನಲ್ಲಿ ಇವರಿಬ್ಬರ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ವಾರೇ ವಾ ಅಂದಿದ್ರು. ಮತ್ತೆ ಬಿಗ್ ಸ್ಕ್ರೀನ್ ಮೇಲೆ ಯಾವಾಗಪ್ಪ ಕಿಚ್ಚ-ರಚ್ಚುನ ನೋಡ್ತಿವಿ ಅಂತ ಹೇಳ್ತಿರುವಾಗಲೇ, ಸ್ಯಾಂಡಲ್ವುಡ್ ಅಂಗಳದಲ್ಲಿ ಈ ಮುದ್ದಾದ ಜೋಡಿಯ ಸೆನ್ಸೇಷನ್ ಸುದ್ದಿಯೊಂದು ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಕಿಚ್ಚ ಸುದೀಪ್ ಅಭಿನಯ ಚಕ್ರವರ್ತಿ ಸ್ಯಾಂಡಲ್ವುಡ್ ಬಾದ್ಷಾ, ಕನ್ನಡಿಗರ ಪ್ರೀತಿಯ ಮಾಣಿಕ್ಯ..ತಮ್ಮ ಆ್ಯಂಗ್ರಿ ಯಂಗ್ ಮ್ಯಾನ್ ಲುಕ್ನಿಂದಲ್ಲೇ ಹೆಬ್ಬುಲಿಯಾಗಿ ಘರ್ಜಿಸುವ ಮೂಲಕ, ಗಂಧದ ಗುಡಿ ರಸಿಕರನ್ನು ಸೆಳೆದಿರೋ ಕೋಟಿಗೊಬ್ಬ.. ಸ್ಯಾಂಡಲ್ವುಡ್ ಟು ಹಾಲಿವುಡ್ವರೆಗೂ ಡಿಫರೆಂಟ್ ಆ್ಯಕ್ಟಿಂಗ್ ಮೂಲಕ ತನ್ನದೇ ಛಾಪು ಮೂಡಿಸಿರೋ ರನ್ನ..
ರಚಿತಾ ರಾಮ್ ಮೋಸ್ಟ್ ಗಾರ್ಜಿಯಸ್ ಬೆಡಗಿ..ತನ್ನ ಗ್ಲಾಮರ್ ಲುಕ್ನಿಂದಲ್ಲೇ ಪಡ್ಡೆಗಳ ನಿದ್ದೆ ಕೆಡಿಸಿದ ಚೆಲುವೆ, ತನ್ನ ಗುಳ್ಳಿ ಕೆನ್ನೆ..ಕ್ಯೂಟ್ ಕ್ಯೂಟ್ ನಟನೆಯಿಂದಲ್ಲೆ ಮೋಡಿ ಮಾಡ್ತಿರೋ ಸುಂದ್ರಿ.. ಸೂಪರ್ ಸ್ಟಾರ್ಗಳ ಜೊತೆ ನಟಿಸಿ ಸೈ ಎನ್ನಿಸಿಕೊಂಡಿರೋ ರಚ್ಚು..ಸದ್ಯ ಸ್ಯಾಂಡಲ್ವುಡ್ನಲ್ಲಿ ಡಿಫರೆಂಟ್ ಮ್ಯಾನರಿಸಂ, ಆ್ಯಕ್ಟಿಂಗ್ ಮೂಲಕವೇ ದರ್ಬಾರ್ ನಡೆಸುತ್ತಿರೋ ಚೆಲುವೆ…
ಇದನ್ನೂ ಓದಿ : ಸಂಗೀತ ಕ್ಷೇತ್ರದ ದಿಗ್ಗಜ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ..! ಕೃತಕ ಉಸಿರಾಟದ ವ್ಯವಸ್ಥೆ..!!
ಕಿಚ್ಚ-ರಚ್ಚು ಮುದ್ದಾದ ಜೋಡಿಯನ್ನ, ಮತ್ತೆ ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ, ಇದೀಗ ರಚ್ಚು-ಕಿಚ್ಚ ಸೆನ್ಸೇಷನ್ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಇದನ್ನೂ ಓದಿ : ಪವರ್ ಅಡ್ಡದಿಂದ ಬಂತು ಫ್ಯಾನ್ಸ್ಗೆ ಭರ್ಜರಿ ಗಿಫ್ಟ್..! ಅಪ್ಪು ರಾಣಿ ಲುಕ್ ಹೇಗಿದೆ ಗೊತ್ತಾ.?
ಈಗಾಗಲೇ ಐಪಿಎಲ್ 2020 ಶುರುವಾಗಬೇಕಿತ್ತು, ಆದ್ರೆ ಕೊರೋನಾ ಕಾರಣದಿಂದ ಐಪಿಎಲ್ಗೆ ಬ್ರೇಕ್ ಬಿದ್ದಿತ್ತು.ಆದ್ರೆ ಐಪಿಎಲ್ ಮತ್ತೆ ಶುರುವಾಗುವ ನ್ಯೂಸ್ ಕೇಳುತ್ತಿದಂತೆ ಅಭಿಮಾನಿಗಳು ಈ ಸಲ ಕಪ್ ನಮ್ಮದೇ ಅನ್ನೋ ಛಲಕ್ಕೆ ಬಿದ್ದಿದ್ದಾರೆ. ಇನ್ನು ಆರ್ಸಿಬಿ ತಂಡ ಅಂತು ಮತ್ತಷ್ಟು ಹುರುಪಿನಿಂದ ಈ ಬಾರಿ ಕಪ್ ಗೆಲ್ಲಲೇ ಬೇಕು ಅಂತ ಪಣ ತೊಟ್ಟಿದ್ದಾರೆ. ಇದಲ್ಲೇದರ ನಡುವೆ ಕ್ರಿಕೆಟ್ ಪ್ರೇಮಿಗಳು ಸೇರಿದಂತೆ, ಚಿತ್ರರಂಗದ ಅಭಿಮಾನಿಗಳು ಈ ಐಪಿಎಲ್ಗೆ ಇನ್ನಷ್ಟು ಬೆರಗುಗೊಳಿಸಲು ರಚಿತಾ ರಾಮ್ ಹಾಗೂ ಕಿಚ್ಚ ಸುದೀಪ್ ರಾಯಭಾರಿ ಆಗಬೇಕು ಅಂತ ಚರ್ಚೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸೌತ್ನಲ್ಲಿ ಸಕ್ಸಸ್ ಕಂಡ ರಶ್ಮಿಕಾ ಮಾಡಿಕೊಂಡ್ರಾ ಎಡವಟ್ಟು..? ಕನ್ನಡ ಚಿತ್ರರಂಗಕ್ಕೆ ಮತ್ತೆ ದ್ರೋಹ ಎಸಗಿದ್ರಾ ಕಿರಿಕ್ ಮಂದಣ್ಣ..?
ಸೋಷಿಯಲ್ ಮೀಡಿಯಾದಲ್ಲಿ ರಚ್ಚು-ಕಿಚ್ಚನದೇ ಟಾಕ್, ಇವರಿಬ್ಬರ ಐಪಿಎಲ್ ರಾಯಭಾರಿ ಆದ್ರೆ ಇನ್ನಷ್ಟು ಹೊಸ ಹುರುಪು ಬರುತ್ತದೆ. ಕಪ್ ಸಹ ನಾವೇ ಗೆಲ್ಲಬಹುದು ಅನ್ನೋ ಮಾತುಗಳು ಕೇಳಿಬರ್ತಿದೆ. ಆದ್ರೆ ಸುದೀಪ್ ಕಡೆಯಿಂದ ಆಗಲ್ಲಿ ಅಥವಾ ರಚಿತಾ ರಾಮ್ ಕಡೆಯಿಂದಾಗಲ್ಲಿ ಅಧಿಕೃತವಾಗಿಲ್ಲ..
ಇದನ್ನೂ ಓದಿ : ಮತ್ತೆ ಬ್ಯಾಟ್ ಹಿಡಿದು ಫೀಲ್ದ್ಗೆ ಇಳಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.! ಶಿವಣ್ಣನ ಕ್ರಿಕೆಟ್ ಆಟ ನೀವು ನೋಡ್ಲೇ ಬೇಕು..!!
ಈ ಹಿಂದೆ ಕುಡ್ಲ ಕುವರಿ ದೀಪಿಕಾ ಪಡುಕೋಣೆ ಆರ್ಸಿಬಿ ತಂಡಕ್ಕೆ ಚಿಯರ್ ಹೇಳಿದ್ರ.ನಂತ್ರ ಮೋಹಕ ತಾರೆ ರಮ್ಯಾ,ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಆರ್ಸಿಬಿ ತಂಡದ ರಾಯಭಾರಿ ಆಗಿದ್ರು. ಈಗ ಕಿಚ್ಚ ಹಾಗೂ ರಚ್ಚು ರಾಯಾಭಾರಿ ಆಗಲ್ಲಿ ಅನ್ನೋದು ಅಭಿಮಾನಿಗಳ ಆಶಯ .