ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್:ಚಾಪ್ಟರ್ 2 ಸಿನಿಮಾದ ನಿರೀಕ್ಷೆಯಲ್ಲಿ ರಾಕಿಂಗ್ ಆಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ನಿರೀಕ್ಷೆಗೂ ಮೀರಿದ ಸಕ್ಸಸ್ ಅನ್ನು ತಂದುಕೊಟ್ಟಿದ್ದು. ಚಾಪ್ಟರ್-2 ಗೆ ಆಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರತಂಡದಿಂದ ಸಿಗುವ ಮಾಹಿತಿಗಾಗಿ ಯಶ್ ಫ್ಯಾನ್ಸ್ ಕಾಯುತ್ತಿದ್ದು. ಅಂಥವರಿಗೆ ಪ್ರಶಾಂತ್ ನೀಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಆಭಿಮಾನಿಗಳು ‘ ರಾಕಿಂಗ್ ಸ್ಟಾರ್’ ಯಶ್ ನಟನೆಯ ಕೆಜಿಎಫ್:2 ಸಿನಿಮಾದ ಟೀಸರ್ ಯಾವಾಗ ಬರಲಿದೆ ? ಎನ್ನುವ ಪ್ರಶ್ನೆಗೆ ನಿರ್ದೇಶಕ ಪ್ರಶಾಂತ್ ನೀಲ್ ಉತ್ತರ ಕೊಟ್ಟಿದ್ದಾರೆ. ಸೋಶಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಜನವರಿ 8 ರಂದು ಕೆಜಿಎಫ್:ಚಾಪ್ಟರ್ 2 ಟೀಸರ್ ಬಿಡುಗಡೆ ಆಗಲಿದೆ ಎಂದು ಮಾಹಿತಿಯನ್ನು ನೀಡಿದ್ದು. ಆಭಿಮಾನಿಗಳ ಸಂತಸಕ್ಕೆ ಕಾರಣಯಾಗಿದ್ದಾರೆ. ಪ್ರಶಾಂತ್ ನೀಲ್ ಕೆಜಿಎಫ್: ಚಾಪ್ಟರ್ 2 ಟೀಸರ್ ಬಿಡುಗಡೆ ಬಗ್ಗೆ ಟ್ಟೀಟ್ ಮಾಡಿದ್ದು. ನಾವು ಆ ಸಿನಿಮಾವನ್ನು ಸೃಷ್ಟಿಸಲು ಒಂದು ವರ್ಷಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಂಡಿರಬಹುದು.ನಾವು ಇನ್ನಷ್ಟು ಬಲಿಷ್ಟರಾಗಿ, ದೊಡ್ಡದಾಗಿ ಆಗಮಿದ್ದೇವೆ ಎಂದಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಜನವರಿ 8 ರಂದು ಬೆಳ್ಳಗ್ಗೆ 10.18ಕ್ಕೆ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಎಂದು ನಿರ್ದೇಶಕ ಪ್ರಶಾಂತ್ ನೀಲ್ ತಿಳಿಸಿದ್ದಾರೆ. ಜೊತೆಗೆ ಜನವರಿ 8 ರಂದು ಯಶ್ ಜನ್ಮದಿನ ಇರುವುದರಿಂದ ಆ ಪ್ರಯುಕ್ತ ಕೆಜಿಎಫ್2 ಟೀಸರ್ ಅವತ್ತೆ ಬಿಡುಗಡೆ ಮಾಡುವುದಾಗಿ ಸುದ್ದಿ ಹಬ್ಬಿತ್ತು. ಆ ಮಾಹಿತಿಯ ಜೊತೆ ಯಶ್ ನಿರ್ದೇಶಕ ಪ್ರಶಾಂತ್ ನೀಲ್ರೊಂದಿಗೆ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.ಆ ಸಿನಿಮಾದ ಕ್ಲೈಮ್ಯಾನ್ಸ್ ಶೂಟಿಂಗ್ ಮುಕ್ತಾಯಗೊಳಿಸಲಾಗಿದ್ದು. ಅದರಲ್ಲಿ ಸಂಜಯ್ ದತ್ ಪಾಲ್ಗೊಂಡಿದ್ದಾರೆ.
2020ಕ್ಕೆ ತೆರೆ ಮೇಲೆ ಬರಬೇಕಿದ್ದ ಸಿನಿಮಾ ಕೊರೊನಾ ವೈರಸ್ ಹಾವಳಿಯಿಂದ ಉಂಟಾದ ಲಾಕ್ಡೌನ್ನಿಂದಾಗಿ ಚಿತ್ರದ ಕೆಲಸಗಳು ತಡವಾಗಿವೆ. ಆ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನು ಬಿಟ್ಟುಕೊಟ್ಟಿಲ್ಲ ಎಂದು ತಿಳಿದು ಬಂದಿದೆ.