ಕೇರಳ: ದೇವರನಾಡನ್ನು ರಣಮಳೆ ಅಲ್ಲೋಲ-ಕಲ್ಲೋಲ ಮಾಡಿದ್ದು, ಸತತ 20 ಗಂಟೆ ಸುರಿದ ಮಳೆಗೆ ಕೇರಳ ತತ್ತರಿಸಿ ಹೋಗಿದೆ. ಭಾರೀ ಮಳೆಯಿಂದಾಗಿ ಐದು ಜಿಲ್ಲೆಗಳು ಕೊಚ್ಚಿಹೋಗಿದೆ.
ಅಯ್ಯಪ್ಪನ ಸನ್ನಿಧಿಗೂ ಜಲ ದಿಗ್ಬಂಧನವಾಗಿದ್ದು, ಕೊಟ್ಟಾಯಂ, ಇಡುಕಿ, ಪಟ್ಟಣಂತಿಟ್ಟು ಜಿಲ್ಲೆಗಳು ಅಲ್ಲೋಲ-ಕಲ್ಲೋಲವಾಗಿದೆ. ಕೊಟ್ಟಾಯಂನ ಕಾವಲಿ ಬಳಿ ಭಾರೀ ಪ್ರಮಾಣದ ಗುಡ್ಡ ಕುಸಿದಿದ್ದು, ಅವಶೇಷಗಳಡಿ 20ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ ಎದುರಾಗಿದೆ. ಸದ್ಯ 5 ಶವಗಳನ್ನು ರಕ್ಷಣಾ ತಂಡ ಹೊರತಗೆದಿದ್ದು, ಯೋಧರು, ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಕೊಟ್ಟಾಯಂ ಜಿಲ್ಲೆಯಲ್ಲಿ ಎರಡು ಸೇನಾ ಹೆಲಿಕಾಪ್ಟರ್ ಕಾರ್ಯಾಚರಣೆ ಮಾಡುತ್ತಿದ್ದು, ಈವರೆಗೆ ಕೇರಳದಲ್ಲಿ ಮಹಾ ಮಳೆ ಅಬ್ಬರಕ್ಕೆ 25ಕ್ಕೂ ಹೆಚ್ಚು ಜನು ಸಾವನಪ್ಪಿದ್ದಾರೆ. ಸದ್ಯ ಕೇರಳದ 5 ಜಿಲ್ಲೆ ರೆಡ್ ಅಲರ್ಟ್, 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ:ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ…! ನಾಲ್ವರ ದುರ್ಮರಣ, ಒಬ್ಬನ ಸ್ಥಿತಿ ಗಂಭೀರ…!