ಬೆಂಗಳೂರು: ರಾಜ್ಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ನಿನ್ನೆ ಸಂಜೆಯಿಂದ ಸುರಿದ ಭಾರಿ ಮಳೆಗೆ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣ ಸಂಪೂರ್ಣ ಕೆರೆಯಂತಾಗಿದ್ದು, ವಿಮಾನ ನಿಲ್ದಾಣಕ್ಕೆ ಜನ ಟ್ರಾಕ್ಟರ್ ಹತ್ತಿ ಹೋಗಿದ್ದರು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಸಹಜ ಸ್ಥಿತಿಗೆ ಮರಳಿದೆ.
ರಾತ್ರಿ ಸುರಿದ ಮಳೆಗೆ ಏರ್ ಪೋರ್ಟ್ ಸುತ್ತಮುತ್ತ ನೀರು ನಿಂತು ಅವಾಂತರವಾಗಿತ್ತು. ರಸ್ತೆಯಲ್ಲಿ ನಿಂತಿದ್ದ ಭಾರಿ ಪ್ರಮಾಣದ ನೀರು ಖಾಲಿಯಾಗಿದ್ದು, ಏರ್ ಪೋರ್ಟ್ ಸಿಬ್ಬಂದಿ ರಾತ್ರಿಯೇ ನೀರು ಹರಿದೋಗಲು ಕಾಲುವೆ ಮಾಡಿ ನೀರು ಖಾಲಿ ಮಾಡಿದ್ದರು. ಇದೀಗ ಏರ್ ಪೋರ್ಟ್ ಗೆ ವಾಹನ ಸವಾರರು ಸರಾಗವಾಗಿ ತೆರಳುತ್ತಿದ್ದಾರೆ. ರಾತ್ರಿ ಭಾರಿ ಮಳೆಯಿಂದ ಏರ್ ಪೋರ್ಟ್ ಪ್ರವೇಶದ ರಸ್ತೆಗಳಲ್ಲಿ ತುಂಬಿದ್ದ ಭಾರಿ ಪ್ರಮಾಣದ ನೀರಿನಿಂದಾಗಿ, ರಸ್ತೆಯಲ್ಲೆ ನಿಂತಿದ್ದ ಟ್ಯಾಕ್ಸಿಗಳನ್ನು ತೆರವು ಮಾಡಲಾಗಿದೆ. ಟರ್ಮಿನಲ್ ರನ್ ವೇ ಸೇರಿದಂತೆ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ.
ಇದನ್ನೂ ಓದಿ:ಮಳೆಗೆ ಬೆಂಗಳೂರು ಏರ್ಪೋರ್ಟ್ ಜಲಾವೃತ…! ಪಾರ್ಕಿಂಗ್ ಪ್ಲೇಸ್ಗೆ ಟ್ರಾಕ್ಟರ್ನಲ್ಲಿ ಹೋದ ಪ್ಯಾಸೆಂಜರ್ಸ್..!