ಬೆಂಗಳೂರು : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ( The Kashmir Files ) ಇಡೀ ವಿಶ್ವದಲ್ಲಿ ಸಂಚಲನ ಮೂಡಿಸಿದ್ದು, ಈ ಬಗ್ಗೆ ನಟಿ ಸಾಯಿ ಪಲ್ಲವಿ ( Sai Pallavi ) ಮಾತನಾಡಿ ಧಾರ್ಮಿಕ ಸಂಘರ್ಷದ ದೃಷ್ಟಿಯಿಂದ ನೀವು ನೋಡುತ್ತೀರಿ ಎಂದಾದರೆ, ಕಾಶ್ಮೀರಿ ಪಂಡಿತರ ಹತ್ಯೆ, ಗೋ ಸಾಗಣೆಕಾರರ ಹತ್ಯೆ ಎರಡೂ ಒಂದೇ ಎಂದು ಹೇಳಿದ್ದಾರೆ. ಸಾಯಿ ಪಲ್ಲವಿಯವರ ಈ ಮಾತು ಈಗ ಹೊಸ ವಿವಾವದಕ್ಕೆ ಕಾರಣವಾಗಿದೆ.
ಸಾಯಿ ಪಲ್ಲವಿ ಹೇಳಿದ್ದೇನು?
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿಯ ಕೆಲವು ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿದೆ. ನಾನು ರಾಜಕೀಯ ವಿಚಾರದಲ್ಲಿ ತಟಸ್ಥೆ. ನಾನು ಬೆಳೆದ ವಾತಾವರಣ ಕೂಡ ಹಾಗೆ ಇತ್ತು. ನಾನು ಎಡ ಮತ್ತು ಬಲದ ಬಗ್ಗೆ ಕೇಳಿದ್ದೇನೆ. ಆದರೆ ನಾನು ಯಾವುದು ಸರಿ ಯಾವುದು ತಪ್ಪು ಎಂದು ಹೇಳಲ್ಲ. ಇತ್ತೀಚಿಗೆ ಬಂದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಸಾಯಿಸಲಾಯಿತು ಎಂದು ತೋರಿಸಲಾಗಿದೆ. ಹಾಗೆ ಇತ್ತೀಚಿಗಷ್ಟೆ ಹಸು ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಎಂದು ಆತನನ್ನು ಹತ್ಯೆಮಾಡಲಾಗಿದೆ. ಆ ವ್ಯಕ್ತಿಯನ್ನು ಹತ್ಯೆ ಮಾಡಿ ಜೈ ಶ್ರೀರಾಮ್ ಎಂದು ಘೋಷಣೆ ಹಾಕಿದ್ದಾರೆ. ಕಾಶ್ಮೀರ ಘಟನೆಗೂ ಈ ಘಟನೆಗೂ ವ್ಯತ್ಯಾಸ ಏನಿದೆಯ?’ ಎಂದು ಸಾಯಿ ಪಲ್ಲವಿ ಕೇಳಿದ್ದಾರೆ. ನೀವು ಧಾರ್ಮಿಕ ದೃಷ್ಟಿಯಿಂದ ನೋಡಿದರೆ, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಹೇಳುವಂತೆ ಕಾಶ್ಮೀರಿ ಪಂಡಿತರ ಮೇಲಿನ ಹತ್ಯೆಗೂ , ಗೋವನ್ನು ಕರೆದುಕೊಂಡು ಹೋಗುವ ಮುಸ್ಲಿಂ ವ್ಯಕ್ತಿಯ ಮೇಲಿನ ಹಲ್ಲೆಗೂ ವ್ಯತ್ಯಾಸವಿಲ್ಲ. ಎಂದು ಸಾಯಿ ಪಲ್ಲವಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ನಮ್ಮ ಮನೆ ಮುಂದೆ ಚಡ್ಡಿ ಪ್ರೊಟೆಸ್ಟ್ ಮಾಡುವಾಗ ಕೊರೋನಾ ಇರಲಿಲ್ವಾ..? ಸುಧಾಕರ್ ಹೇಳಿಕೆಗೆ ಸಿದ್ದು ತಿರುಗೇಟು…!