ಬೆಳಗಾವಿ, ಹು-ಧಾರವಾಡ, ಕಲಬುರಗಿ ಪಾಲಿಕೆ ಚುನಾವಣೇ ಭಾರೀ ಸದ್ದು ಮಾಡುತ್ತಿದ್ದು, ಈ ಚುನಾವಣೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಮೊದಲ ಬಾರಿಗೆ ಬೆಳಗಾವಿಯಲ್ಲಿ ಪಕ್ಷ ಚಿನ್ಹೆ ಅಡಿ ಎಲೆಕ್ಷನ್ ನಡೆಯುತ್ತಿದ್ದು, ಘಟಾನುಘಟಿಗಳಿಂದ ಮುಗಿದಿದೆ ಅಬ್ಬರದ ಪ್ರಚಾರ ಜೋರಾಗಿ ನಡೆಯುತ್ತಿದ್ದು, ನಾಳೆ 3 ಕಾರ್ಪೊರೇಷನ್ ಗಳಿಗೆ ಮತದಾನ ನಡೆಯಲಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಈ ಚುನಾವಣೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, ಮೂರು ಕ್ಷೇತ್ರದಲ್ಲೂ ಕಮಲ ಅರಳಿಸಲು ಅಧಿಕಾರ ಪಡೆಯುಲು ಪಕ್ಷ ಪ್ರಯತ್ನ ಪಡುತ್ತಿದೆ. ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಜೆಡಿಎಸ್ ನಿಂದ ರಣತಂತ್ರ ಹೂಡಲಾಗಿದ್ದು, ಹುಬಳ್ಳಿ- ಧಾರವಾಡದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಗೆಲುವಿನ ಕನಸಿದೆ. ಅಧಿಕಾರ ಹಿಡಿಯಬೇಕೆಂದು ಕಾಂಗ್ರೆಸ್ ನಿಂದ ಸರ್ಕಸ್ ನಡೆಯುತ್ತಿದ್ದು, ಜೆಡಿಎಸ್ ನಿಂದಲೂ ಗೆಲುವಿಗಾಗಿ ಪ್ರಯತ್ನವಿದೆ. ಕಲಬುರಗಿಯಲ್ಲಿ ಕಮಲ ಅರಳಿಸಲು ಬಿಜೆಪಿ ಶತಪ್ರಯತ್ನ ಮಾಡುತ್ತಿದ್ದು, ಪಾಲಿಕೆ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಂದ ಪ್ರತಿತಂತ್ರ, ಕಲಬುರಗಿಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಲು ಯತ್ನಿಸುತ್ತಿದ್ದು, ಪ್ರತಿ ಪಕ್ಷವು ಅಧಿಕಾರದ ಚುಕ್ಕಾಣೆ ಹಿಡಿಯಲು ಹರ ಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ:ಅಂದು ಮೀಸಲಾತಿ ಸಿಕ್ಕರೆ ಅಭಿನಂದನಾ ಸಮಾರಂಭ… ಇಲ್ಲದಿದ್ದರೆ ಧರಣಿ ಮುಂದುವರಿಕೆ: ಜಯಮೃತ್ಯುಂಜಯ ಸ್ವಾಮೀಜಿ