ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ನಡೆಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಅಲರ್ಟ್ ಆಗಿರುವ ಕಾರಾಗೃಹ ಇಲಾಖೆ 7 ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಜರುಗಿಸಿ ವರ್ಗಾವಣೆ ಮಾಡಿದೆ.
ಅಕ್ರಮದ ಕುರಿತು ತನಿಖೆ ನಡೆಸಲು ಎಡಿಜಿಪಿ ಮುರುಗನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ ವರದಿ ಆಧರಿಸಿ 7 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸಮಿತಿ ತನ್ನ ವರದಿಯಲ್ಲಿ 18 ಮಂದಿ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲು ಶಿಫಾರಸ್ಸು ಮಾಡಿತ್ತು.
ಈಗ ಬೆಂಗಳೂರು ಸೆಂಟ್ರಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 7 ಅಧಿಕಾರಿಗಳನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ವರ್ಗಾವಣೆ ಮಾಡಲಾಗಿದೆ.
ಎನ್.ಅಶೋಕ್ (ವಿಜಯಪುರ)
ಎಸ್.ಎನ್.ರಮೇಶ್ (ಬಳ್ಳಾರಿ)
ಶಿವಾನಂದ ಕೆ.ಗಾಣಿಗಾರ್ (ಬೆಳಗಾವಿ)
ಉಮೇಶ್ ಆರ್.ದೊಡ್ಡಮನಿ (ಮೈಸೂರು)
ಲೊಕೇಶ್ ಪಿ. (ಧಾರವಾಡ)
ಭೀಮಣ್ಣ ದೇವಪ್ಪ ನೆದಲಗಿ (ಶಿವಮೊಗ್ಗ)
ಮಹೇಶ್ ಸಿದ್ದನಗೌಡ ಪಾಟೀಲ್( ಕಲಬುರಗಿ) ವರ್ಗಾವಣೆಯಾಗಿರುವ ಅಧಿಕಾರಿಗಳು.