ಬಾಲಿವುಡ್ನ ಎಂಎಸ್ ಧೋನಿ ಖ್ಯಾತಿಯ ಸುಶಾಂತ್ ಸಿಂಗ್ ಡಿಪ್ರೆಶನ್ನಿಂದಲೇ ಸಾವನ್ನಪ್ಪಿದ ಬೆನ್ನಲ್ಲೆ ಬಾಲಿವುಡ್ನಿಂದ ಸ್ಯಾಂಡಲ್ವುಡ್ ವರೆವಿಗೂ ಸಾಕಷ್ಟು ಚರ್ಚೆಯಾಗಿತ್ತು. ಅನೇಕ ತಾರೆಯರು ನಾನೂ ಕೂಡ ಡಿಪ್ರೆಶನ್ ಗೆ ಒಳಗಾಗಿದ್ದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದೀಗ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 3 ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಡಿಪ್ರೆಶನ್ಗೆ ಒಳಗಾಗಿ ಫೇಸ್ ಬುಕ್ನಲ್ಲಿ ಐ ಕ್ವಿಟ್ ದಿಸ್ ವರ್ಲ್ಡ್ ಎಂದು ಫೋಸ್ಟ್ ಮಾಡಿ ಸೂಸೈಡ್ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಜಯಶ್ರೀ ತಮ್ಮ ಫೇಸ್ ಬುಕ್ನಲ್ಲಿ ಐ ಕ್ವಿಟ್ ದಿಸ್ ವರ್ಲ್ಡ್ ( ನನಗೆ ಈ ಜಗತ್ತೂ ಬೇಡ..ಡಿಪ್ರೆಷನ್ ಬೇಡಾ ) ಎಂದು ಪೋಸ್ಟ್ ಮಾಡಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಜಯಶ್ರೀ ಫೋನ್ ಸ್ವಿಚ್ ಆಫ್ ಮಾಡಿಕೊಂಡ ಬೆನ್ನಲ್ಲೇ ಸ್ಯಾಂಡಲ್ವುಡ್ ಗಡಗಡ ನಡುಗ ತೊಡಗಿದ್ದು, ನಟಿಯ ಪತ್ತೆಗಾಗಿ ಸ್ನೇಹಿತ-ಸ್ನೇಹಿತೆಯರು ತೀವ್ರ ಹುಡುಕಾಟ ನಡೆಸಿದ್ದಾರೆ
ಜಯಶ್ರೀ ಫೇಸ್ ಬುಕ್ನಲ್ಲಿ ಮಾಡಿರುವ ಪೋಸ್ಟ್ಗೆ ಪಿನ್ ಮಾಡಿ ಆಕೆಯ ಅನೇಕ ಸ್ನೇಹಿತರು ಸರಣಿ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ. ಜಯಶ್ರೀ ಮಾಡಿರುವ ಡಿಪ್ರೆಶನ್ ಪೋಸ್ಟ್ ನೋಡಿದ ದೀಪು ಗೌಡ್ರು ಎನ್ನುವವರು “ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಈಕೆಯ ಪರಿಚಯ ,ಸ್ನೇಹ ಯಾರಿಗಾದ್ರೂ ಇದ್ರೇ,, ಬೇಗ ಈಕೆಗೆ ಕಾಲ್ ಮಾಡಿ ಅಥವಾ ಅವರಿರುವ ಜಾಗಕ್ಕೆ ಭೇಟಿ ಮಾಡಿ ದಯವಿಟ್ಟು ಯಾರಾದರು ಆಕೆಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ”.
ಬಿಗ್ಬಾಸ್ ನಟಿ ಜಯಶ್ರೀ ಸೂಸೈಡ್ ಅಟೆಂಪ್ಟ್ ಮಾಡಿಕೊಳ್ಳುತ್ತಿರುವ ಬಗ್ಗೆ ಅಪ್ಡೆಟ್ ಕಂಡಕೂಡಲೇ ವಿ.ಜೆ ಪವನ್ ಕುಮಾರ್ ‘ಜಯಶ್ರೀ ರವರಿಗೆ ಫೋನ್ ಮಾಡಲು ತುಂಬಾ ಪ್ರಯತ್ನಿಸುತ್ತಿದ್ದೇನೆ. ಆಕೆಯ ಫೋನ್ ಸ್ವಿಚ್ ಆಫ್ ಬರುತ್ತಿದೆ. ದಯವಿಟ್ಟು ಆಕೆಯ ಮನೆಯ ಸಮೀಪವಿರುವವರು ಜಯಶ್ರೀಯ ಸಹಾಯಕ್ಕೆ ಧಾವಿಸಿ ಆಕೆ ಹೇಗಿದ್ದಾಳೆ ಎಂದು ನೋಡಿ’ ಎಂದು ಪೋಸ್ಟ್ ಮಾಡಿದ್ದಾರೆ.
ಮಾನಸಿಕ ಖಿನ್ನತೆಗೆ ಒಳಗಾಗಿ ಜಯಶ್ರೀ ವಿಷಾ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ನನ್ನನ್ನು ಸಾಯಲು ಬಿಡಿ ನನಗೆ ಬದುಕಲು ಇಷ್ಟವಿಲ್ಲ ಎಂದು ಆಸ್ಪತ್ರೆಗೆ ಅಡ್ಮಿಟ್ ಆಗಲು ನಿರಾಕರಿಸಿದ್ದಾರೆ. ಇದೀಗ ಸ್ನೇಹಿತರು ಹಾಗು ಕುಟುಂಬದವರು ಮನವೊಲಿಸಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ ಎಂದು ಬಿಟಿವಿಯೊಂದಿಗೆ ಮಾತನಾಡಿದ ಜಯಶ್ರೀಯ ಸ್ನೇಹಿತೆ ನಟಿ ಅದ್ವಿತಿ ಶೆಟ್ಟಿ ತಿಳಿಸಿದ್ದಾರೆ.