ಮುಂಬೈ; ಕಂಗನಾ ರಣಾವತ್ ಸಿನಿಮಾಗಳಂದ್ರೆ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿ, ಕೋಟಿ ಕೋಟಿ ಕಲೆಕ್ಷನ್ ಮಾಡುತ್ತೆ ಅನ್ನೋ ಲೆಕ್ಕಾಚಾರ ಇದೆ. ಆದ್ರೆ ಈಗ ಕಂಗನಾ ರಣಾವತ್ ಸಿನಿಮಾ ಫ್ಲಾಪ್ ಆಗಿ, ಬಾಕ್ಸ್ ಆಫೀಸ್ನಲ್ಲಿ ಟೂಸ್ ಪಟಾಕಿ ಆಗಿದೆ. ಹೌದು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ನಟನೆಯ ತಲೈವಿ ಸಿನಿಮಾ, ರಿಲೀಸ್ಗೂ ಮೊದಲು ಸಾಕಷ್ಟು ಕುತೂಹಲವಿತ್ತು. ಇದಲ್ಲದೇ ಟೀಸರ್ ಹಾಗೂ ಸಾಂಗ್ಗಳಿಂದಲೇ ಹೈಪ್ ಕ್ರಿಯೇಟ್ ಆಗಿತ್ತು.
ಇದನ್ನೂ ಓದಿ: ಗಣೇಶನ ಹಬ್ಬಕ್ಕೆ ದೀಪಿಕಾ ಸ್ಪೆಷಲ್ ಫೋಟೋಶೂಟ್..! ಹೇಗಿವೆ ಗೊತ್ತಾ ಹೊಸ ಫೋಟೋಗಳು..!
ಇದನ್ನೂ ಓದಿ: ಖ್ಯಾತ ನಟನಿಗೆ ಆಕ್ಸಿಡೆಂಟ್.. ಮೆಗಾಸ್ಟಾರ್ ಸೋದರಳಿಯನ ಸ್ಥಿತಿ ಗಂಭೀರ..
ತಮಿಳು ಚಿತ್ರರಂಗದಲ್ಲಿ ನಾಯಕಿಯಾಗಿ ಮೆರೆದು, ತಮಿಳುನಾಡು ಮುಖ್ಯಮಂತ್ರಿಯಾಗಿ ವರ್ಣರಂಜಿತ ಜೀವನ ನಡೆಸಿದ್ದ ಜಯಲಲಿತಾರ ಜೀವನಾಧರಿತ ಸಿನಿಮಾ, ಇದೇ ಗಣಪತಿ ಹಬ್ಬದ ವಿಶೇಷವಾಗಿ ಸೆಪ್ಟಂಬರ್ 10ರಂದು
ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ರಿಲೀಸ್ ಆಗಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ಕಂಗೊಳಿಸಿದ್ದಾರೆ. ಸಾಮಾನ್ಯವಾಗಿ ಕಂಗನಾ ರಣಾವತ್ ಸಿನಿಮಾಗಳು ಬಾಲಿವುಡ್ನಲ್ಲಿ ಸೂಪರ್ ಹಿಟ್ ಆಗುತ್ತದೆ. ಆದ್ರೆ ಯಾಕೋ ಗೊತ್ತಿಲ್ಲ ಕಂಗನಾ ತಲೈವಿ ಸಿನಿಮಾಕ್ಕೆ, ಬಾಲಿವುಡ್ ಮಂದಿ ಅಷ್ಟಾಗಿ ಆಸಕ್ತಿ ತೋರಿಸಿಲ್ಲ.
ಇನ್ನು ಕೊರೋನಾ ಇರುವುದಕ್ಕಾ ಅಥವಾ ಬೇರೆ ಏನ್ ಕಾರಣನಾ ಗೊತ್ತಿಲ್ಲ, ನೆಚ್ಚಿನ ಅಮ್ಮನ ಜೀವನಗಾಥೆಯನ್ನ ತಮಿಳಿಗರು ಅಷ್ಟಾಗಿ ನೋಡಲಿಲ್ಲ. ಟಾಲಿವುಡ್ನಲ್ಲಿ ಕೇಳೋದೆ ಬೇಡ ತಲೈವಿ ಸಿನಿಮಾಕ್ಕೆ ರೆಸ್ಪಾನ್ಸ್ ಸ್ವಲ್ಪವೂ ಇಲ್ಲ. 3ವರ್ಷಗಳ ಹಿಂದೆ ತಲೈವಿ ಹೆಸರಿನಲ್ಲೆ ರಮ್ಯಾ ಕೃಷ್ಣ ಅಭಿನಯಿಸಿದ ವೆಬ್ ಸಿರಿಸ್ ಸಕತ್ತಾಗಿ ಸೌಂಡು ಮಾಡಿತ್ತು. 11 ಎಪಿಸೋಡ್ ಇದ್ದ ವೆಬ್ ಸಿರಿಸ್ ಗೆ ಜನ ಸಾಕಷ್ಟು ಮೆಚ್ಚುಗೆ ವ್ಯಕ್ತ ಪಡಿಸಿದ್ರು. ಕೋಟಿ ಗಂಟಲೆ ವಿವ್ಸ್ ಘಳಿಸಿದ ಲಿಸ್ಟ್ ನಲ್ಲಿ ತಲೈವಿ ವೆಬ್ ಸಿರಿಸ್ ಸಹ ಸೇರಿಕೊಂಡಿತ್ತು. ಸಿನಿ ಪ್ರೀಯರು ರಮ್ಯಾ ಕೃಷ್ಣರನ್ನು ಮೆಚ್ಚದಷ್ಟು ಕಂಗಾನ ಕಡೆ ಒಲುವು ತೋರಿಸಿಲ್ಲ.
ಅಂದ್ಹಾಗೆ ತಲೈವಿ ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಷಯಕ್ಕೆ ಸಾಕಷ್ಟು ಸುದ್ದಿ ಮಾಡಿತ್ತು. ಆದ್ರೆ ಥಿಯೇಟರ್ಗೆ ಎಂಟ್ರಿ ಕೊಟ್ಮೇಲೆ, ತಲೈವಿ ಸೌಂಡ್ ಸೈಲೆಂಟ್ ಆಗಿದೆ. ಕೆಲ ಮೂಲಗಳ ಪ್ರಕಾರ ತಲೈವಿ ಸಿನಿಮಾದ ತಮಿಳು, ತೆಲುಗು ಹಾಗೂ ಹಿಂದಿ, ಈ ಮೂರು ಭಾಷೆಯು ಸೇರಿ ಮೊದಲ ದಿನದ ಕಲೆಕ್ಷನ್ ಒಂದು ಕೋಟಿ ಗಡಿ ದಾಟಿಲ್ಲವಂತೆ. ಒಟ್ನಲ್ಲಿ ಕಂಗನಾ ರಣಾವತ್ ತಲೈವಿ ಸಿನಿಮಾ ರಿಲೀಸ್ಗೂ ಮೊದಲೇ, ಪ್ರೇಕ್ಷಕರ ಮನದಲ್ಲಿ ತುಂಬಾ ಎಕ್ಸ್ಪೆಕ್ಟೇಷನ್ ಇದ್ದು, ರಿಲೀಸ್ ಆದ್ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರಾಸೆಯಾಗಿದ್ದಾರೆ.