ಬೆಂಗಳೂರು: ಕಲಾಸಿಪಾಳ್ಯ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ 85 ಲಕ್ಷ ದೋಚಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಗಮನ ಬೇರೆಡೆ ಸೆಳೆದು 85 ಲಕ್ಷ ಹಣವನ್ನು ದೋಚಲಾಗಿತ್ತು. ಜಿಲಾನಿ, ಕಮ್ಮರ್, ಪೃಥ್ವಿಕ್ ಬಂಧಿತ ಆರೋಪಿಗಳು. ಚಿನ್ನದ ವ್ಯಾಪಾರಿಗಳಿಂದ ಹಣ ಕಲೆಕ್ಟ್ ಮಾಡಿ ಕೃಷ್ಣಪ್ಪ ಹಾಗೂ ವರುಣ್ ಸಿಂಗ್ ಎಂಬುವರು ತರುತ್ತಿದ್ದನ್ನು ಗಮನಿಸಿದ್ದ ಜಿಲಾನಿ ತನ್ನ ಟೀಂ ಕರೆತಂದು ನಾಲಾ ರಸ್ತೆ ಸುಧಾಮ್ ನಗರದ ಬಳಿ ವರುಣ್ ಬೈಕ್ಗೆ ಡಿಕ್ಕಿ ಹೊಡೆಸಿದ್ದರು.
ಹಿಂಬದಿಯಿಂದ ಬಂದು ಆಕ್ಸಿಡೆಂಟ್ ಆಗಿರೋದಕ್ಕೆ ಪರಿಹಾರ ನೀಡುವಂತೆ ಗಲಾಟೆಗೆ ನಿಂತಿದ್ದರು. ಗಲಾಟೆ ನಡೀತಿದ್ದ ಸಮಯದಲ್ಲಿ ವರುಣ್ ಕೈಲಿದ್ದ 85 ಲಕ್ಷ ಹಣ ಕಸಿದು ಪರಾರಿಯಾಗಿದ್ದರು. ತಕ್ಷಣ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ವರುಣ್ ದೂರು ನೀಡಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು 62 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿಗೆ ಶೋಧ ನಡೆದಿದೆ.