ಕಲಬುರಗಿ: ನಿನ್ನೆ ನಡೆದ ಎಸಿಬಿ ದಾಳಿಯಲ್ಲಿ ಕಲಬುರಗಿಯ PWD ಜೆಇ ಶಾಂತಗೌಡ ಬಿರಾದಾರ್ ಮನೆಯ ಪೈಪ್ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಇದನ್ನೂ ನೋಡಿದ ಎಸಿಬಿ ಅಧಿಕಾರಿಗಳೇ ಶಾಕ್ಗೆ ಒಳಗಾಗಿದ್ದರು. ಅಷ್ಟಕ್ಕೂ ಬಿರಾದಾರ್ ಮನೆಯ ಪೈಪ್ನಲ್ಲಿ ಕಂತೆ-ಕಂತೆ ಹಣ ಸಿಕ್ಕಿದ್ದು ಹೇಗೆ ಗೊತ್ತಾ..? ACB ಟೀಂ ಕಣ್ಣಿಗೆ ಪೈಪ್ ಒಳಗಿದ್ದ ನೋಟಿನ ಸೀಕ್ರೆಟ್ ಬಿದ್ದಿದ್ದೇಗೆ? ಎಂದು ಯೋಚನೆ ಮಾಡುತ್ತಿದ್ದೀರಾ ಇಲ್ಲಿದೆ ಓದಿ..
ಎಸಿಬಿ ಎಂಟ್ರಿ ವೇಳೆ ಮನೆ ಟರೇಸ್ ಮೇಲಿದ್ದ ಬಿರಾದಾರ್ ಮಗ, ಕೂಡಲೇ ಮನೆ ಒಳಗಿದ್ದ ತಂದೆಗೆ ಮಾಹಿತಿ ನೀಡಿದ್ದಾನೆ.
ಎಸಿಬಿ ಅಧಿಕಾರಿಗಳು ಬಾಗಿಲು ತಟ್ಟಿದರೂ ಸಹ 15 ನಿಮಿಷ ಬಾಗಿಲು ತೆಗೆದಿರಲಿಲ್ಲ. ಈ 15 ನಿಮಿಷದಲ್ಲೇ ಶಾಂತಗೌಡ ಬಿರಾದಾರ್ ಲಕ್ಷ-ಲಕ್ಷ ಹಣ ಬಚ್ಚಿಟ್ಟಿದ್ದಾರೆ. ಕೈಗೆ ಸಿಕ್ಕ ಹಣವನ್ನ ಗಾಬರಿಯಲ್ಲಿ ಬಚ್ಚಿಡಲು ಮುಂದಾಗಿದ್ದಾರೆ. ಟೆರೇಸ್ ಮೇಲಿನ ಪೈಪ್ ಒಳಗೆ ಆತುರಾತುರವಾಗಿ ಹಣ ಸುರಿದು, ಬಳಿಕ ಪೈಪ್ ಮೇಲೆ ಶಾಂತಗೌಡ ಬಿರಾದಾರ ಕಲ್ಲಿಟ್ಟು ಕೆಳಗೆ ಬಂದಿದ್ದಾರೆ. ಪೈಪ್ ಮೇಲಿದ್ದ ಕಲ್ಲು ನೋಡಿ ಎಸಿಬಿ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಜೊತೆಗೆ ರೇಡ್ ನಡೆಯುತ್ತಿದ್ದಾಗ ಬಿರಾದಾರ್ ಮಗ ಆಗಾಗ ಪೈಪ್ ಬಳಿ ಅಡ್ಡಾಡಿದ್ದಾನೆ. ಬಿರಾದರ್ ಮಗನ ವರ್ತನೆಯಿಂದ ಸಂಶಯಗೊಂಡ ಎಸಿಬಿ ಅಧಿಕಾರಿಗಳು ಪೈಪ್ ಮೇಲಿನ ಕಲ್ಲು ತಗೆದು ನೋಡಿದಾಗ ಪೈಪ್ ನಲ್ಲಿ ನೋಟುಗಳು ಗೋಚರವಾಗಿದೆ. ಈ ಹಿನ್ನೆಲೆ ಪ್ಲಂಬರ್ ಕರೆಸಿ ಪೈಪ್ ಕಟ್ ಮಾಡಿಸಿದ್ದಾರೆ. ಈ ವೇಳೆ ಪೈಪ್ ನಲ್ಲಿ ಮುಚ್ಚಿಟ್ಟಿದ್ದ ಗರಿಗರಿ ನೋಟು ಅಧಿಕಾರಗಳ ವಶಕ್ಕೆ ಸಿಕ್ಕಿದೆ.
ಇದನ್ನೂ ಓದಿ:ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ… ಬರೋಬ್ಬರಿ 850 ಕ್ಕೂ ಹೆಚ್ಚು ಮೊಬೈಲ್ ವಶಕ್ಕೆ …