ಕಲಬುರಗಿ : ಕಲಬುರಗಿಯಲ್ಲಿ RD ಅಣ್ತಮ್ಮಾಸ್ ಫುಲ್ ಮಿಂಚುತ್ತಿದ್ದಾರೆ. ಆರ್.ಡಿ.ಪಾಟೀಲ್ ಸೋದರರು PSI ಪರೀಕ್ಷೆ ಅಕ್ರಮದ ಕಿಂಗ್ಪಿನ್ ಆಗಿದ್ದರು. ಆರ್.ಡಿ.ಪಾಟೀಲ್ ಬ್ರದರ್ಸ್ ಅಫಜಲಪುರದಲ್ಲಿ ಮಿಂಚುತ್ತಿದ್ದಾರೆ.
ಆರ್.ಡಿ ಪಾಟೀಲ್, ಮಹಾಂತೇಶ್ ಪಾಟೀಲ್ ದಿವಗಂತ ವಿಠಲ್ ಹೇರೂರ್ ಕಂಚಿನ ಪ್ರತಿಮೆ ಅನಾವರಣಕ್ಕೆ ಸ್ವಾಗತ ಕೋರುವ ಕಟೌಟ್ ಕಟೌಟ್, ಬ್ಯಾನರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 24ರಂದು ಕಲಬುರಗಿ ಜಿಲ್ಲೆಯ ದೇವಲ್ ಗಾಣಗಾಪುರದಲ್ಲಿ ಪ್ರತಿಮೆ ಅನಾವರಣವಾಗಲಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಕಂಚಿನ ಪ್ರತಿಮೆ ಅನಾವರಣಕ್ಕೆ ಆಗಮಿಸುತ್ತಿದ್ದಾರೆ. ಪ್ರತಿಮೆ ಕಾರ್ಯಕ್ರಮ ಸ್ವಾಗತಕ್ಕೆ ಆರ್.ಡಿ.ಪಾಟೀಲ್ ಸೋದರರ ಸ್ವಾಗತ ಕೋರುತ್ತಿದ್ದಾರೆ. ಆರ್.ಡಿ.ಪಾಟೀಲ್ ಸೋದರರು ಕಟೌಟ್, ಬ್ಯಾನರ್ ಹಾಕಿ ಸ್ವಾಗತ ಕೋರುತ್ತಿದ್ದಾರೆ. ಪಾಟೀಲ್ ಸೋದರರು ಕಳೆದ ತಿಂಗಳು ಬೇಲ್ ಮೇಲೆ ಹೊರ ಬಂದಿದ್ದರು. ಆರ್.ಡಿ.ಪಾಟೀಲ್ ಸಿಐಡಿ ಸಮನ್ಸ್ ನೀಡಲು ಬಂದಾಗ ಎಸ್ಕೇಪ್ ಆಗಿದ್ದನು. ಆದ್ರೆ ಈಗ ಅಫಜಲಪುರದಲ್ಲಿ ಅಣ್ಣ-ತಮ್ಮಂದಿರ ಬ್ಯಾನರ್, ಕಟೌಟ್ ರಾರಾಜಿಸುತ್ತಿದೆ.
ಇದನ್ನೂ ಓದಿ : ಸ್ಯಾಂಟ್ರೋ ರವಿ ವಿಗ್ ಸೀಕ್ರೆಟ್ ವಿಚಾರಣೆ ವೇಳೆ ಬಯಲು..! 4 ವರ್ಷದ ನಂತರ ಗಂಡನ ಒರಿಜಿನಲ್ ವೇಷ ಕಂಡು ಸ್ಯಾಂಟ್ರೋ ಪತ್ನಿ ತಬ್ಬಿಬ್ಬು..