ಕಲಬುರಗಿ: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 14 ಆರೋಪಿಗಳ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
ಕಲಬುರಗಿಯ 3 ನೇ ಹೆಚ್ಚುವರಿ JMFC ಕೋರ್ಟ್ 9 ಆರೋಪಿಗಳ ಅರ್ಜಿ ವಜಾ ಮಾಡಿದ್ದರೆ, ಕಲಬುರಗಿಯ 1 ನೇ ಅಧಿಕ ಜಿಲ್ಲಾ ಸತ್ಯ ನ್ಯಾಯಾಲಯ 5 ಆರೋಪಿಗಳ ಜಾಮೀನು ಅರ್ಜಿ ಯನ್ನು ವಜಾ ಮಾಡಿದೆ.
ಇದನ್ನೂ ಓದಿ: ಗೃಹ ಇಲಾಖೆಯನ್ನು ನಾನು ಚಾಲೆಂಜಾಗಿ ತಗೊಂಡಿದ್ದೀನಿ..! ಖಾತೆ ಬದಲಾವಣೆಗೆ ನಾನು ಕೇಳೇ ಇಲ್ಲ: ಆರಗ ಜ್ಞಾನೇಂದ್ರ…
ವಿಶಾಲ್, ರುದ್ರಗೌಡ, ಹಯ್ಯಾಳಿ ದೇಸಾಯಿ, ಮಲ್ಲಿಕಾರ್ಜುನ ಪಾಟೀಲ್, ಮಹಾಂತೇಶ್ ಪಾಟೀಲ್, ಸುರೇಶ್ ಕಾಟೆಗಾಂವ್, ಕಾಳಿದಾಸ, ಸದ್ದಾಂ, ಶರಣಬಸಪ್ಪ, ಹಗರಣದ ಕಿಂಗ್ಪಿನ್ ರಾಜೇಶ್ ಹಾಗರಗಿ, ಚೇತನ್, ಅರುಣ್, ಸುಮಾ ಮತ್ತು ಸಿದ್ದಮ್ಮಾ ಅವರ ಬೇಲ್ ಅರ್ಜಿ ವಜಾಗೊಂಡಿದೆ.