ಕಡೂರು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಸಿಕ್ಕಿದ್ರಾ..? ವೈಎಸ್ವಿ ದತ್ತಾ ಎದುರು ಯುವ ಅಭ್ಯರ್ಥಿ ನಿಲ್ತಾರಾ..? ಧರ್ಮೇಗೌಡರ ಪುತ್ರ ಸುನಾಲ್ಗೆ ಕಡೂರು ಟಿಕೆಟ್ ಸಾಧ್ಯತೆಗಳಿದ್ದು, ಕೆಲವೇ ದಿನಗಳಲ್ಲಿ ಸುನಾಲ್ ಹೆಸರು ಘೋಷಣೆ ಸಾಧ್ಯತೆಯಿದೆ. ಧರ್ಮೇಗೌಡ ಪರಿಷತ್ ಮಾಜಿ ಉಪ ಸಭಾಪತಿಯಾಗಿದ್ದರು.
ಹೆಚ್ಡಿಡಿ, ರೇವಣ್ಣ ಜತೆ ಈಗಾಗಲೇ ಹೆಚ್ಡಿಕೆ ಚರ್ಚಿಸಿರೋ ಮಾಹಿತಿ ದೊರಕಿದ್ದು, ಹೆಚ್ಡಿಕೆಕಡೂರು ಕ್ಷೇತ್ರದ ಜೆಡಿಎಸ್ ಮುಖಂಡರ ಜತೆ ಚರ್ಚಿಸಿದ್ದಾರೆ. ಧರ್ಮೇಗೌಡ ಚಿಕ್ಕಮಗಳೂರು ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದರು. ಧರ್ಮೇಗೌಡರ ತಂದೆ ಲಕ್ಷ್ಮಯ್ಯ ಕೂಡಾ ಶಾಸಕರಾಗಿದ್ದರು. ಧರ್ಮೆಗೌಡ ಫ್ಯಾಮಿಲಿ ಜನತಾ ಪರಿವಾರಕ್ಕೆ ನಿಷ್ಠರಾಗಿದ್ದಾರೆ.
ಹೆಚ್ಡಿಕೆ ಧರ್ಮೆಗೌಡರು ಸಾವನ್ನಪ್ಪಿದ್ದಾಗ ಕುಟುಂಬದ ಜತೆ ನಿಲ್ಲುವೆ ಎಂದಿದ್ದರು. ಇದೀಗ ಸುನಾಲ್ಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ. ತಾತ ಮತ್ತು ತಂದೆಯ ವರ್ಚಸ್ಸಿನ ಮೇಲೆ ಸುನಾಲ್ ಗೆಲ್ಲುವ ಲೆಕ್ಕಾಚಾರ ಮಾಡಿದ್ದಾರೆ. ಮಾಜಿ MLA ವೈಎಸ್ವಿ ದತ್ತಾ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಕಡೂರನ್ನು ಮತ್ತೆ ತನ್ನ ತೆಕ್ಕೆಗೆ ತಗೆದುಕೊಳ್ಳಲು ದಳಪತಿಗಳ ರಣತಂತ್ರ ಮಾಡಿದ್ದಾರೆ.
ಇದನ್ನೂ ಓದಿ : ಮೂರು ಆಡಿಯೋ ರಿಲೀಸ್ ಮಾಡಿರೋ R.D ಪಾಟೀಲ್ ಬೆಂಬಲಿಗರು.. ಸಿಐಡಿ DySP ಶಂಕರಗೌಡ ಜೊತೆ ಮಾತ್ನಾಡಿದ್ದಾರೆ ಎನ್ನಲಾದ ಆಡಿಯೋ…