ಬೆಂಗಳೂರು : ಜೆಪಿ ನಗರದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು , ಒಂದೇ ದಿನ 3 ಕಡೆ ರಾಬರಿ ಮಾಡಿದ್ದ ಗ್ಯಾಂಗ್ನ್ನು ಬಂಧಿಸಿದ್ದಾರೆ.
ಪೊಲೀಸರು ರಾಬರಿ ಮಾಡುತ್ತಿದ್ದ ರಾಘವೇಂದ್ರ , ಭಾನುಪ್ರಕಾಶ್, ಯೂನಿಸ್ ಸೇರಿ 6 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಕಳೆದ ವಾರ ಪುಟ್ಟೇನಹಳ್ಳಿ, ಜೆಪಿನಗರ ಸೇರಿ ಒಂದೇ ದಿನ 3 ಕಡೆ ರಾಬರಿ ಮಾಡಿದ್ದರು. ಅಲ್ಲದೇ ಆರೋಪಿಗಳ ವಿರುದ್ಧ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಬೈಕ್, ಮೊಬೈಲ್ ಕಳ್ಳತನ ಸೇರಿ 20ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದವು , ಆದ್ದರಿಂದ ಜೆಪಿ ನಗರದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ,ಆರೋಪಿಗಳಿಂದ 37.5 ಲಕ್ಷ ಮೌಲ್ಯದ 23 ಬೈಕ್ ,12 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ : ಗಾಂಜಾ ಕ್ಯಾಪಿಟಲ್ ಆಗೋಯ್ತಾ ಆರ್.ಟಿ.ನಗರ..? ಪೆಟ್ಟಿಗೆ ಅಂಗಡಿಗಳಲ್ಲೂ ರಾಜಾರೋಷವಾಗಿ ಗಾಂಜಾ ಮಾರಾಟ…!