ಬೆಂಗಳೂರು: ಕಿರುತೆರೆಯಲ್ಲಿ ನಟ ಅನಿರುದ್ದ್, ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಜೋಡಿಯ ಅಭಿನಯಕ್ಕೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಅಲ್ಲದೇ, ಜೀ ವಾಹಿನಿಯಲ್ಲಿ ಬೆಸ್ಟ್ ಧಾರಾವಾಹಿಯಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಬಿಜೆಪಿ ಸಂಸದ ಗೌತಮ್ ಗಂಭೀರ್ ಗೆ ಐಸಿಸ್ ಉಗ್ರರಿಂದ ಜೀವ ಬೆದರಿಕೆ… ಗಂಭೀರ್ ಮನೆಗೆ ಬಿಗಿ ಭದ್ರತೆ…
ಜೊತೆ ಜೊತೆಯಲಿ ಸಿರಿಯಲ್ ಆರಂಭವಾಗಿ ಎರಡು ವರ್ಷಗಳಾಗಿವೆ. ಅಂದಿನಿಂದ ಇಂದಿನ ವರೆಗೂ ಎಲ್ಲರ ನೆಚ್ಚಿನ ಧಾರಾವಾಹಿಯಾಗಿ ಹೊರಹೊಮ್ಮಿದೆ. ಪ್ರತಿ ದಿನ ಸಂಜೆಯಾಗುತ್ತಿದ್ದಂತೆ ಜನ ಟಿವಿ ಮುಂದೆ ಕಾದು ಕೂರುವಂತೆ ಮಾಡಿದೆ. 45 ವರ್ಷದ ಶ್ರೀಮಂತ ಉದ್ಯಮಿ, ಆರ್ಯವರ್ಧನ್ “ಆರ್ಯ” 20 ವರ್ಷದ ಮಧ್ಯಮ ವರ್ಗದ ಮಹಿಳೆ ಅನು ಸಿರಿಮನೆಯನ್ನು ಪ್ರೀತಿಸುತ್ತಾನೆ. ಆರ್ಯನ ಜೀವನಕ್ಕೆ ಪ್ರವೇಶಿಸಿದ ನಂತರ ಅನು ಜೀವನ ಬದಲಾಗುತ್ತದೆ. ಇದು ಒಂದು ಹಂತದ ಕಥೆಯಾದರೆ 2ನೇ ಸೀಜನ್ ನಲ್ಲಿ ಕಥೆಯ ಹಂದರ ಬದಲಾಗುತ್ತಿದ್ದು, ಪ್ರೇಕ್ಷಕರಿಗೆ ಇನ್ನು ಹೆಚ್ಚು ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.
45 ವರ್ಷ ಆರ್ಯ 20 ಅನುನಾ ಹೇಗೆ ಪ್ರೀತಿಸಲು ಸಾಧ್ಯ ಇದರ ಹಿಂದೆ ಬೇರೆ ಏನೋ ಕಥೆ ಇದೆ ಎಂದು ಹಲವರು ಅನುಮಾನ ಪಟ್ಟಿದ್ದು ಈಗ ನಿಜವಾಗಿದೆ. ಅಸಲಿಗೆ ಈ ಕಥೆ ಪುನರ್ಜನ್ಮದ ಕಥಾಹಂದರವನ್ನು ತೆರೆದುಕೊಳ್ಳುತ್ತಿದೆ. ಅದರಲ್ಲಿ ಆರ್ಯವರ್ಧನನ ಅಸಲಿ ಮುಖವಾಡ ಕಳಚುತ್ತಿದೆ. ಅನು ಜೊತೆಗೆ ಮದುವೆಯಾಗುವ ಮುನ್ನ ಆರ್ಯವರ್ಧನನ ಅಸಲಿಯತ್ತೇನಿತ್ತು ಎಂದು ಅನುಗೆ ಅರ್ಥವಾಗುತ್ತದೆ. ಹೌದು ಈ ಅನು ಸಿರಿಮನೆ ಆರ್ಯವರ್ಧನನ ಮೊದಲ ಹೆಂಡತಿಯ ಪುನರ್ಜನ್ಮ. ಆರ್ಯ ಮತ್ತು ಅನು ಮದುವೆ ಫಿಕ್ಸ್ ಆದಾಗಿನಿಂದಲೂ ಅನುಗೆ ತನ್ನ ಹಿಂದಿನ ಜನ್ಮದ ನೆನಪು ಬರಲು ಆರಂಭಿಸಿದೆ. ಅದರಲ್ಲಿ ಆರ್ಯ ರಾಜನಂದಿನಿಗೆ ಮಾಡಿದ ಮೋಸ ಹಾಗೂ ಆಸ್ತಿಗಾಗಿ ಕಟ್ಟಿಕೊಂಡ ಹೆಂಡತಿಯನ್ನೇ ಸಾಯಿಸಿದ ಬಗ್ಗೆ ಎಲ್ಲವೂ ತಿಳಿಯುತ್ತೆ.
ಇದನ್ನೂ ಓದಿ: ಕಲಬುರಗಿಯ ಶಾಂತಗೌಡ ಮನೆಯ ಮೂಲೆ-ಮೂಲೆಯಲ್ಲೂ ಹಣ… ಬಾತ್ ರೂಂ ಪೈಪ್ನಲ್ಲಿ ಕಂತೆ-ಕಂತೆ ಹಣ ಪತ್ತೆ…
ಸದ್ಯ ಅನು ಆರ್ಯನ ಅಸಲಿಯತ್ತೇನೆಂದು ಬಯಲಿಗೆ ಎಳೆದು ಆಸ್ತಿಗೆ ಹರ್ಷವರ್ಧನನ್ನು ಒಡೆಯನಾಗಿ ಮಾಡಲು ಹರ ಸಾಹಸ ಪಡಬೇಕಾಗುತ್ತೆ ಅಂತೆಯೇ ಆರ್ಯವರ್ಧನನ ನಿಜವಾದ ಬಣ್ಣ ಬಯಲು ಮಾಡುವಲ್ಲಿ ಅನು ಪ್ರಾಣ ಪಣಕ್ಕೆ ಇಡುವ ಸ್ಥಿತಿ ಬರಬಹುದು.. ರಾಜನಂದಿನಿಯ ಪುನರ್ಜನ್ಮವಾಗಿರುವ ಅನು ತನಗಾದ ಅನ್ಯಾಯವನ್ನು ಯಾವ ರೀತಿ ಸರಿ ಪಡಿಸಿಕೊಳ್ಳುತ್ತಾಳೆ..? ಆರ್ಯವರ್ಧನ್ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಕಾದು ನೋಡಬೇಕಾಗಿದೆ..